ಒಳಿತು ಮಾಡೋ ಮನುಷ ನೀ ಇರುದು ಮೂರು ದಿವಸ ಹಾಡಿನಲ್ಲಿಯೂ ಅವರು ಮಾಡಿದ್ದು ಅದನ್ನೇ. ಹೃದಯಕ್ಕೇ ಕೈ ಹಾಕಿದ್ದರು.
ಕಾಯಕವೇ ಕೈಲಾಸ ಎಂದರೋ ಬಸವ.. ಅದರಂತೆ ನಡೆದರು ನಡೆದಾಡುವಾ ದೈವ ಹಾಡಿನಲ್ಲೂ ಮರುಗುವಂತೆ ಮಾಡಿದ್ದರು. ಈಗ ಅವರದ್ದೇ ನಿರ್ದೇಶನದ ಒನ್ ವೇ ಚಿತ್ರದಲ್ಲೂ ಪ್ರೇಕ್ಷಕರ ಎದೆಗೇ ಕೈ ಹಾಕಿದ್ದಾರೆ ನಿರ್ದೇಶಕ ಋಷಿ. ಕೆಣಕಿಯೂ ಇದ್ದಾರೆ.
ಇದು 20 ಕೋಟಿ ಬಂಡವಾಳ ಹಾಕಿ ತೆಗೆದ ಚಿತ್ರವಲ್ಲ.. 20 ಸೋತ ಜೀವಗಳ ಅಡವಿಟ್ಟು ತೆಗೆದ ಚಿತ್ರ ಎಂದೇ ಪ್ರಚಾರ ಮಾಡುತ್ತಿದ್ದಾರೆ ಋಷಿ. ಚಿತ್ರದಲ್ಲಿ ರಜನಿಕಾಂತ್ ಮತ್ತು ಅವರ ಗೆಳೆಯ ರಾಜ್ ಬಹದ್ದೂರ್ ಗೆಳೆತನದ ಕತೆ ಇದೆ. ಜೊತೆಯಲ್ಲಿ ಹೃದಯ ಮುಟ್ಟುವ ಸಂದೇಶವೂ ಇದೆ. ನಾಳೆ ರಿಲೀಸ್ ಆಗುತ್ತಿದೆ.