ಸಿನಿಮಾ, ಕಿರುಚಿತ್ರಗಳ ನಿರ್ದೇಶನ.. ಎರಡೂ ಕಡೆ ಗುರುತಿಸಿಕೊಂಡಿರುವ ಐಶಾನಿ ಶೆಟ್ಟಿ, ಗುಳ್ಟು ಹೀರೋ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಶ್ರೀಧರ್ ಷಣ್ಮುಖ ಎಂಬ ಹೊಸ ಪ್ರತಿಭೆ ಈ ಚಿತ್ರದಿಂದ ನಿರ್ದೇಶಕರಾಗುತ್ತಿದ್ದಾರೆ.
ಶ್ರೀಧರ್ ಈಗಾಗಲೇ ಪುರಿ ಜಗನ್ನಾಥ್ ಸೇರಿದಂತೆ ಹಲವು ಖ್ಯಾತನಾಮರ ಜೊತೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ ಅನುಭವ ಹೊಂದಿರುವ ಪ್ರತಿಭೆ. ಈ ಚಿತ್ರದಲ್ಲಿ ಗುಳ್ಟು ನವೀನ್ ಶಂಕರ್ ಎದುರು ಐಶಾನಿ ನಾಯಕಿ.
ಓಂಕಾರ್ ಮತ್ತು ಪ್ರಶಾಂತ್ ಅಂಚನ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಕ್ರೈಂ ಸ್ಟೋರಿಯಿದೆ. ನಮ್ಮ ಕಥೆಗೆ ಐಶಾನಿ ಪರ್ಫೆಕ್ಟಾಗಿ ಹೊಂದುತ್ತಾರೆ. ಹೀಗಾಗಿ ಅವರನ್ನು ಕಾಂಟ್ಯಾಕ್ಟ್ ಮಾಡಿದೆವು. ಅವರಿಗೂ ಕಥೆ ಇಷ್ಟವಾಗಿ ಓಕೆ ಎಂದರು ಎನ್ನುತ್ತಾರೆ ಶ್ರೀಧರ್. ಚಿತ್ರೀಕರಣ ಶೀಘ್ರದಲ್ಲೇ ಶುರುವಾಗಲಿದೆ.