ಜಯಂತ್ ಕಾಯ್ಕಿಣಿ ಸಾಹಿತ್ಯಕ್ಕೆ ನಮ್ಮ ಸಾಹಿತ್ಯ ಬರೆಯೋದಾ..? ಅದೇನು ಸುಮ್ಮನೆ ಮಾತಾ..? ಅವರ ಅಕ್ಷರಗಳ ಮೋಡಿಗೆ ನಮ್ಮ ಅಕ್ಷರ ಜೋಡಿಸೋದು ಅಂದ್ರೆ ಹೇಗೆ..? ಅದೆಲ್ಲ ಚಿಂತೆ ಪಕ್ಕಕ್ಕಿಡಿ. ಈ ಸ್ಪರ್ಧೆಯಲ್ಲಿ ನೀವು ಗೆದ್ದರೆ ನಿಮಗೆ ಬಹುಮಾನ ಕೊಡೋದು ಬೇರೆ ಯಾರೋ ಅಲ್ಲ, ಸ್ವತಃ ಜಯಂತ ಕಾಯ್ಕಿಣಿ.
ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರತಂಡದ ಸ್ಪರ್ಧೆ. ನಿಮಗೆ ಟಿ.ಆರ್. ಚಂದ್ರಶೇಖರ್ ಗೊತ್ತಲ್ಲ.. ಚಮಕ್, ಅಯೋಗ್ಯ, ಬೀರ್ಬಲ್ ಚಿತ್ರಗಳ ನಿರ್ಮಾಪಕ. ಅವರು ಈಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಅನ್ನೋ ಚಿತ್ರ ನಿರ್ಮಿಸುತ್ತಿದ್ದಾರೆ. ಆ ಚಿತ್ರದ ಒಂದು ಹಾಡನ್ನು ಬಿಡುಗಡೆ ಕೂಡಾ ಮಾಡಿದ್ದಾರೆ. ಆ ಹಾಡಿನ ಪಲ್ಲವಿ ಹಾಗೂ ಚರಣಗಳಿಗೆ ನೀವು ಹೊಸ ಸಾಹಿತ್ಯ ಬರೆಯಬೇಕು. ಆ ಹಾಡಿನ ಸಾಹಿತ್ಯ ಜಯಂತ ಕಾಯ್ಕಿಣಿಯವರದ್ದು.
ಮಣಿಕಾಂತ್ ಕದ್ರಿ ಸಂಗೀತ ನೀಡಿರುವ ಹಾಡುಗಳಿಗೆ, ಕಾಯ್ಕಿಣಿ ಬರೆದಿರುವ ಸಾಹಿತ್ಯಕ್ಕೆ ಪರ್ಯಾಯವಾಗಿ ನೀವೊಂದು ಹಾಡು ಸೃಷ್ಟಿಸಿ. ಮೆಚ್ಚುಗೆ ಪಡೆದ 3 ಪಲ್ಲವಿ ಹಾಗೂ ಸಾಹಿತ್ಯಕ್ಕೆ ಸ್ವತಃ ಜಯಂತ ಕಾಯ್ಕಿಣಿಯವರೇ ಬಹುಮಾನ ನೀಡಲಿದ್ದಾರೆ.
ಅಂದಹಾಗೆ ಸ್ಪರ್ಧೆ ಈಗಾಗಲೇ ಶುರುವಾಗಿ ಹೋಗಿದೆ. 23ರಿಂದಲೇ ಶುರುವಾಗಿರುವ ಸ್ಪರ್ಧೆ ಇದು. ಜೂನ್ 28ಕ್ಕೆ ಸ್ಪರ್ಧೆ ಮುಕ್ತಾಯ. ತಡ ಮಾಡಬೇಡಿ.