ಅಹಂ ಪ್ರೇಮಾಸ್ಮಿ, ರಜನಿ, ಸಂತ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದ ಆರತಿ ಛಾಬ್ರಿಯಾ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಚಾರ್ಟೆಡ್ ಅಕೌಂಟೆಂಟ್ ವಿಶಾರದ್ ಜೊತೆ ಮದುವೆಯಾಗಿದ್ದಾರೆ. ಮುಂಬೈನಲ್ಲಿ ಅದ್ಧೂರಿಯಾಗಿಯೇ ಮದುವೆ ಕಾರ್ಯಕ್ರಮ ನಡೆದಿದೆ.
ಪತಿ ವಿಶಾರದ್, ಅಂತಾರಾಷ್ಟ್ರೀಯ ಖ್ಯಾತಿಯ ಚಾರ್ಟೆಡ್ ಅಕೌಂಟೆಂಟ್. ವಿವಿಧ ದೇಶಗಳ ಉದ್ಯಮಿಗಳು ವಿಶಾರದ್ ಅವರ ಸಲಹೆ ಪಡೆಯುತ್ತವೆ. ಅವರು ಶೀಘ್ರದಲ್ಲಿಯೇ ಭಾರತದಲ್ಲಿಯೇ ನೆಲೆಸಲು ಬರುತ್ತಿದ್ದಾರೆ. ಮದುವೆಯ ನಂತರವೂ ಚಿತ್ರರಂಗದೊಂದಿಗೆ ಕಂಟಿನ್ಯೂ ಆಗುತ್ತೇನೆ ಎಂದಿದ್ದಾರೆ ಆರತಿ ಛಾಬ್ರಿಯಾ.