ಚಿತ್ರಲೋಕ.ಕಾಮ್.. ಕನ್ನಡ ಚಿತ್ರರಂಗದ ಮೊತ್ತ ಮೊದಲ ಸಿನಿಮಾ ವೆಬ್‍ಸೈಟ್. ಪಾರ್ವತಮ್ಮ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಲೋಕಾರ್ಪಣೆ ಮಾಡಿದ್ದ, ಕೆ.ಎಂ.ವೀರೇಶ್ ಅವರ ಕನಸಿನ ಕೂಸು ಚಿತ್ರಲೋಕ.ಕಾಂ ಈಗ 19 ವರ್ಷ ಪೂರೈಸಿ, 20ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದೆ.
ಗೂಗಲ್, ಸ್ಮಾರ್ಟ್ ಫೋನ್, ನವನೀನ ಆ್ಯಪ್ಸ್, ಸೋಷಿಯಲ್ ಮೀಡಿಯಾ.. ಇವ್ಯಾವುದೂ ಇಲ್ಲದ ವೇಳೆಯಲ್ಲಿ.. ಇಂಟರ್‍ನೆಟ್ ಎನ್ನುವುದು ಮಂಗಳ ಗ್ರಹದ ವಸ್ತುವೇನೋ ಎಂಬಂತೆ ಅಪರೂಪವಾಗಿದ್ದ ಕಾಲದಲ್ಲಿಯೇ ಆರಂಭವಾದ ವೆಬ್‍ಸೈಟ್ ಚಿತ್ರಲೋಕ.ಕಾಮ್.
ಕಳೆದ 19 ವರ್ಷಗಳಲ್ಲಿ ಚಿತ್ರಲೋಕ ಮೈಲುಗಲ್ಲುಗಳನ್ನೇ ಸೃಷ್ಟಿಸಿದೆ. ಎರಡು ಬಾರಿ ಲಿಮ್ಕಾ ದಾಖಲೆ ಬರೆದಿದೆ. ಅತಿ ಹೆಚ್ಚು ರ್ಯಾಂಕ್ ಪಡೆದ ಕರ್ನಾಟಕದ ವೆಬ್‍ಸೈಟ್ ಎಂಬ ದಾಖಲೆ ಬರೆದಿದ್ದ ಇತಿಹಾಸವೂ ಚಿತ್ರಲೋಕಕ್ಕಿದೆ. ಕರ್ನಾಟಕದಲ್ಲಷ್ಟೇ ಅಲ್ಲ, ದೇಶದ ವಿವಿಧ ಭಾಗಗಳಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಫೋಟೋ ಎಕ್ಸಿಬಿಷನ್ ಮಾಡಿದ ಖ್ಯಾತಿ ಚಿತ್ರಲೋಕದ್ದು. ಚಿತ್ರಲೋಕ, ಒಂದು ರೀತಿಯಲ್ಲಿ ಕನ್ನಡ ಚಿತ್ರರಂಗದ ಲೈಬ್ರೆರಿಯೂ ಹೌದು.
ಇಷ್ಟೆಲ್ಲ ಸಾಧನೆಗೆ, ಹೆಮ್ಮೆಗೆ ಕಾರಣರಾದ ಚಿತ್ರಲೋಕ ವೆಬ್‍ಸೈಟ್ ಸಿಬ್ಬಂದಿಗೆ, ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರಿಗೆ, ಬೆನ್ನುತಟ್ಟಿ ಪ್ರೋತ್ಸಾಹಿಸಿದ ಗೆಳೆಯರಿಗೆ, ಕನ್ನಡದ ಮಾಧ್ಯಮಲೋಕದ ಸ್ನೇಹಿತರಿಗೆ, ಅಭಿಮಾನಿಗಳಿಗೆ ಹಾಗೂ ವಿಶೇಷವಾಗಿ ಚಿತ್ರಲೋಕವನ್ನು ಬ್ರೌಸ್ ಮಾಡುತ್ತಾ.. ಪ್ರೋತ್ಸಾಹಿಸುತ್ತಿರುವ ಓದುಗರಿಗೆ ಧನ್ಯವಾದಗಳು.
ನಿಮ್ಮ ಪ್ರೀತಿಯ
ಕೆ.ಎಂ.ವೀರೇಶ್
ಸಂಪಾದಕರು, ಚಿತ್ರಲೋಕ
Related Articles :-