ಡಿಂಪಲ್ ಕ್ವೀನ್ ರಚಿತಾ ರಾಮ್ ಕಣ್ಣೀರಿಟ್ಟಿದ್ದಾರೆ. ಅದೂ ಮಾಧ್ಯಮವೊಂದರ ಸಂದರ್ಶನದಲ್ಲಿ. ಸದಾ ನಗುವಿಗೆ ಹೆಸರಾದ ಡಿಂಪಲ್ ಕ್ವೀನ್ ಅಪ್ಪನ ಕ್ಷಮೆ ಕೇಳಿ ಕಣ್ಣೀರಿಟ್ಟಿದ್ದಾರೆ. ಅವರ ಕಣ್ಣೀರಿಗೆ ಕಾರಣ ಐ ಲವ್ ಯೂ ಸಿನಿಮಾ ಹಾಗೂ ಆ ಬೋಲ್ಡ್ ದೃಶ್ಯಗಳು.
ರಚಿತಾ ಅವರ ತಾಯಿ, ಅಕ್ಕ ಸಿನಿಮಾ ನೋಡಿ ಮೆಚ್ಚಿಕೊಂಡರೂ ರಚಿತಾ ಅವರ ತಂದೆ ಸಿನಿಮಾ ನೋಡಿಲ್ಲವಂತೆ. ಅದಕ್ಕೆ ಕಾರಣ ಇಷ್ಟೆ, ರಚಿತಾ ರಾಮ್‍ನನ್ನು ಹೀರೋಯಿನ್ ಆಗಿ ಹಾಗೆ ನೋಡಬಹುದೇನೋ.. ಆದರೆ, ಒಬ್ಬ ತಂದೆಯಾಗಿ ಹಾಗೆ ನೋಡಲು ಸಾಧ್ಯವಿಲ್ಲ ಎಂದಿದ್ದಾರಂತೆ ರಚಿತಾ ಅವರ ತಂದೆ. ಇನ್ನು ಮುಂದೆ ಹಾಗೆ ಮಾಡಲ್ಲ ಎಂದಿರುವ ರಚಿತಾ ರಾಮ್‍ಗೆ, ಅಪ್ಪ ಒಂದು ಮಾತು ಹೇಳಿದ್ರಂತೆ.
ನೀನು ಸಿನಿಮಾ ಇಂಡಸ್ಟ್ರಿಗೆ ರಚಿತಾ ರಾಮ್ ಇರಬಹುದು. ನನಗೆ ಪುಟ್ಟ ಮಗು ಎಂದರಂತೆ. ಅದನ್ನು ನೆನಪಿಸಿಕೊಂಡು ಕಣ್ಣೀರಿಟ್ಟು ಕ್ಷಮೆ ಕೇಳಿದ್ದಾರೆ ರಚಿತಾ ರಾಮ್.
ಇದೆಲ್ಲದರ ನಡುವೆಯೂ ಐ ಲವ್ ಯೂ ಸಿನಿಮಾ ಬಾಕ್ಸಾಫೀಸ್‍ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಸೂಪರ್ ಹಿಟ್ ಸಾಲಿಗೆ ಸೇರಿದೆ.