ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆಯಾಗಿದೆ. ಪ್ರದರ್ಶಕ ಗುಬ್ಬಿ ಜೈರಾಜ್, ಮಂಡಳಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಕ್‍ಲೈನ್ ವೆಂಕಟೇಶ್, ಸುಂದರ್‍ರಾಜ್ ಹಾಗೂ ನರಸಿಂಹಲು ಕಣದಿಂದ ಹಿಂದೆ ಸರಿದ ಕಾರಣ, ಜೈರಾಜ್ ಅವಿರೋಧವಾಗಿ ಆಯ್ಕೆಯಾದರು.
ಜೂನ್ 29ಕ್ಕೆ ವಾಣಿಜ್ಯ ಮಂಡಳಿಯ ವಿವಿಧ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ. ನೂತನ ಅಧ್ಯಕ್ಷ ಜೈರಾಜ್ ಹಿಂದಿನ ಅಧ್ಯಕ್ಷ ಚಿನ್ನೇಗೌಡರು ಹಾಗೂ ನೂತನವಾಗಿ ಆಯ್ಕೆಯಾಗುವ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಚಿತ್ರೋದ್ಯಮದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದಿದ್ದಾರೆ ಜೈರಾಜ್.
ಅಧ್ಯಕ್ಷ ಸ್ಥಾನದ ಜೊತೆಗೆ ಗೌರವ ಕಾರ್ಯದರ್ಶಿಯಾಗಿ ವಿತರಕ ವಲಯದಿಂದ ಎಂ.ನರಸಿಂಹಲು, ಉಪಾಧ್ಯಕ್ಷ ಸ್ಥಾನಕ್ಕೆ ಪ್ರದರ್ಶಕ ವಲಯದಿಂದ ವೆಂಕಟರಮಣ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಎ.ಗೋವಿಂದರಾಜು, ಅವಿನಾಶ್ ಶೆಟ್ಟಿ, ಎಸ್‍ವಿ ಜೋಷಿ, ಶ್ರವಣ್‍ಕುಮಾರ್, ಬಿ.ಮಹೀಂದ್ರಕರ್, ರಂಗಸ್ವಾಮಿ, ನಾಗರಾಜ್ ಸಿ ಆಯ್ಕೆಯಾಗಿದ್ದಾರೆ.