` ರೇಮೋ ಪ್ರೇಮ್ ಕಹಾನಿ ಆರಂಭ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
pavan wadeyar's reymo launched
Reymo Launch Image

ಅವನ ಹೆಸರು ರೇವಂತ್.. ಅವಳ ಹೆಸರು ಮೋಹನಾ.. ಅವರಿಬ್ಬರ ಹೆಸರಿನ ಮೊದಲ ಅಕ್ಷರ ಸೇರಿದರೆ ರೇಮೋ.. ಅಷ್ಟೇ ಅಲ್ಲ.. ನಾಯಕ ವಿಚಿತ್ರ ಸ್ವಭಾವದವನು. ಅದಕ್ಕೆ ತಕ್ಕಂತೆ ಅವನ ಹೆಸರು ರೇಮೋ..

ನಿಮಗೆ ಅನ್ನಿಯನ್ ಚಿತ್ರದ ಕ್ಯಾರೆಕ್ಟರ್ ನೆನಪಾಗಿದ್ದರೆ, ಆಶ್ಚರ್ಯವಿಲ್ಲ. ಅಲ್ಲಿ ವಿಕ್ರಂ ಅವತಾರದ ಮಾಡ್ ಪಾತ್ರದ ಹೆಸರು ರೇಮೋ.. 

ಇಷ್ಟೆಲ್ಲ ಇರೋ ಈ ಚಿತ್ರ ಈಗ ಶುರುವಾಗಿಯೇ ಬಿಟ್ಟಿದೆ. ರೋಗ್ ಮೂಲಕ ಗಮನ ಸೆಳೆದಿದ್ದ ನಟ ಇಶಾನ್, ಚುಟುಚುಟು ಚೆಲುವು ಅಶಿಕಾ ರಂಗನಾಥ್ ನಟಿಸುತ್ತಿರುವ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ನಿರ್ದೇಶಕ ಪವನ್ ಒಡೆಯರ್.

ವಿಲನ್ ನಂತರ ಸಿ.ಆರ್. ಮನೋಹರ್ ನಿರ್ಮಿಸುತ್ತಿರುವ ಚಿತ್ರಿವಿದು. ಇಶಾನ್, ಮನೋಹರ್ ಫ್ಯಾಮಿಲಿ ಹುಡುಗ. ಚಿತ್ರದ ಮುಹೂರ್ತಕ್ಕೆ ಶಿವರಾಜ್‍ಕುಮಾರ್ ಮತ್ತು ಗೀತಾ ಆಗಮಿಸಿ ಶುಭ ಕೋರಿದರು.