ನೀನಾಸಂ ಸತೀಶ್ ಹುಟ್ಟುಹಬ್ಬದ ದಿನವೇ ರನೌಟ್ ಆಗಿ ಪ್ರೇಕ್ಷಕರ ಮುಖದಲ್ಲಿ ನಗು ಅರಳಿಸಿದ್ದಾರೆ. ಬ್ರಹ್ಮಚಾರಿ ಚಿತ್ರದ ಟೀಸರ್ ಅಷ್ಟರಮಟ್ಟಿಗೆ ನಗು ಉಕ್ಕಿಸಿದೆ. ಚಿತ್ರದ ಕಥೆ ಏನಿರಬಹುದು..? ಹೇಗಿರಬಹುದು.? ಎಂಬ ಕುತೂಹಲಕ್ಕೂ ಟೀಸರ್ನಲ್ಲಿ ಚಿಕ್ಕ ಉತ್ತರ ಸಿಕ್ಕಿದೆ. ಇನ್ನು ಬಾಯಿಚಪ್ಪರಿಸಿಕೊಂಡು, ಕಿವಿ ಅಗಲಿಸಿಕೊಂಡು ಚಿತ್ರಕ್ಕೆ ವೇಯ್ಟ್ ಮಾಡುವವರ ಸಂಖ್ಯೆಯೂ ಹೆಚ್ಚಿದೆ.
ಉದಯ್ ಮೆಹ್ತಾ ಬ್ಯಾನರ್ನಲ್ಲಿ ಸತೀಶ್ ನಟಿಸುತ್ತಿರುವ ಬ್ರಹ್ಮಚಾರಿ ಚಿತ್ರದ ಟೀಸರ್ನಲ್ಲಿ ಕಾಮಿಡಿಯ ಟಚ್ ಇದೆ. ಫಸ್ಟ್ ನೈಟ್ ದಿನವೇ ಆದಿತಿ ಪ್ರಭುದೇವ ಎದುರು ರನೌಟ್ ಆಗುವ ಸತೀಶ್, ಡಾಕ್ಟರ್ ದತ್ತಣ್ಣನ ಬಳಿ ಕಷ್ಟ ಹೇಳಿಕೊಳ್ಳುವ ಪುಟ್ಟ ಬಿಟ್ ಟೀಸರ್ನಲ್ಲಿದೆ. ನಾಯಕನ ಕಷ್ಟ ಹೇಳೋದು ಶಿವರಾಜ್ ಕೆಆರ್ ಪೇಟೆ.
ಇದು ಬಾಂಬೆ ಮಿಠಾಯಿ, ಡಬಲ್ ಎಂಜಿನ್ ಚಿತ್ರಗಳನ್ನು ನಿರ್ದೇಶಿಸಿದ್ದ ಚಂದ್ರಮೋಹನ್ ನಿರ್ದೇಶನದ ಸಿನಿಮಾ.