ಹಫ್ತಾ.. ಚಿತ್ರದಲ್ಲಿರೋದು ಭೂಗತ ಲೋಕದ ಕಥೆ ಅನ್ನೋದನ್ನು ಚಿತ್ರತಂಡ ಓಪನ್ ಆಗಿಯೇ ಹೇಳಿಕೊಂಡಿದೆ. ಸಾಫ್ಟ್‍ವೇರ್ ಹುಡುಗ ಭೂಗತ ಲೋಕವನ್ನು ಕಾರ್ಪೊರೇಟ್ ಶೈಲಿಯಲ್ಲಿ ಆಳುವ ಮನಸ್ಸು ಮಾಡುತ್ತಾನೆ. ಮಾತನಾಡದೇ ಕೆಲಸ ಮಾಡುವ, ಬುದ್ದಿವಂತಿಕೆಯನ್ನು ಕ್ರೈಂಗೆ ಬಳಸಿಕೊಳ್ಳುವ ನಾಯಕನಾಗಿ ರಾಘವ್ ನಾಗ್ ಇದ್ದರೆ, ಮಂಗಳಮುಖಿ ಪಾತ್ರವೂ ಸೇರಿದಂತೆ ಮೂರು ಶೇಡ್‍ಗಳಲ್ಲಿ ಕಾಣಿಸಿಕೊಂಡಿರೋದು ವರ್ಧನ್.
ಇದರ ನಡುವೆ ಸ್ನೇಹದ ಸೆಂಟಿಮೆಂಟ್ ಇದೆ. ಸೆಕ್ಸ್ ವರ್ಕರ್ ಬದುಕಿನ ತಲ್ಲಣವೂ ಇದೆ. ಮಗುವಿನ ಸೆಂಟಿಮೆಂಟ್ ಇದೆ. ಹುಡುಗಿ-ಹುಡುಗರ ರೊಮ್ಯಾನ್ಸ್ ಇದೆ.. ಒಟ್ಟಿನಲ್ಲಿ ಇದು ಎಲ್ಲರೂ ಕುಟುಂಬ ಸಮೇತ ಕುಳಿತು ನೋಡಬಹುದಾದ ಸಿನಿಮಾ ಎನ್ನುವುದು ನಿರ್ದೇಶಕ ಪ್ರಕಾಶ್ ಹೆಬ್ಬಾಳ ಕಾನ್ಫಿಡೆನ್ಸ್.