ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಸಂಜನಾ ಗಲ್ರಾನಿ, ಇದೇ ಮೊದಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ತಮಿಳಿನಲ್ಲಿ ವಿವೇಕ್ ಕಣ್ಣನ್ ಎಂಬುವರು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಸಂಜನಾಗೆ ಬಾಕ್ಸರ್ ಪಾತ್ರ.
ಮೊದಲ ಚಿತ್ರದಲ್ಲೇ ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಮಹಿಳಾ ಪ್ರಧಾನ ಸಿನಿಮಾ. ತೆಲುಗು ಧಾರಾವಾಹಿಗಾಗಿ ಕಲಿತ ಕತ್ತಿ ವರಸೆ, ಕುದುರೆ ಸವಾರಿ, ಬಾಕ್ಸಿಂಗ್ ಎಲ್ಲವೂ ಈ ಚಿತ್ರದಲ್ಲಿ ಅವಕಾಶ ಗಿಟ್ಟಿಸಲು ನೆರವಾದವು ಎನ್ನುತ್ತಾರೆ ಸಂಜನಾ.