ಹೆಬ್ಬುಲಿ ಚಿತ್ರದಲ್ಲಿ ನಟಿಸಿದ್ದ ಮಲಯಾಳಿ ಚೆಲುವೆ ಅಮಲಾ ಪೌಲ್, ಹುಟ್ಟುಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಮಲಾ ಬೋಲ್ಡ್‍ನೆಸ್‍ಗೆ ಇಡೀ ಭಾರತೀಯ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಮೈಮೇಲೆ ಒಂದೆಳೆ ಬಟ್ಟೆಯೂ ಇಲ್ಲದೆ ಸಂಪೂರ್ಣ ನಗ್ನರಾಗಿ ಕಾಣಿಸಿಕೊಂಡಿದ್ದಾರೆ ಅಮಲಾ ಪೌಲ್. ಅದು ತಮಿಳಿನ ಅಡೈ ಚಿತ್ರಕ್ಕಾಗಿ.
ಹೆಣ್ಣು ಮಕ್ಕಳ ಅಪಹರಣದ ಬ್ಯಾಕ್‍ಗ್ರೌಂಡ್ ಕಥೆಗೆ ರತ್ನಕುಮಾರ್ ನಿರ್ದೇಶನವಿದೆ. ಕ್ರೈಂ ಥ್ರಿಲ್ಲರ್ ಕಥೆಯಲ್ಲಿ ಅಮಲಾ ಪೌಲ್ ಬೆತ್ತಲೆ ನಟನೆ ಅಭಿಮಾನಿಗಳ ಹುಬ್ಬೇರಿಸಿದ್ದರೆ, ಬಾಲಿವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್‍ನ ಖ್ಯಾತನಾಮರ ಮೆಚ್ಚುಗೆ ಗಳಿಸಿದೆ. ಕರಣ್ ಜೋಹರ್, ಸಮಂಥಾ ಅಕ್ಕಿನೇನಿ, ವಿಶಾಲ್, ಕಾರ್ತಿಕ್ ಸುಬ್ಬರಾಜು, ರಾಮ್‍ಗೋಪಾಲ್ ವರ್ಮಾ ಮೊದಲಾದವರು ಅಮಲಾ ಪೌಲ್ ಧೈರ್ಯಕ್ಕೆ, ನಟನೆಗೆ ಶಹಬ್ಬಾಸ್ ಹೇಳಿದ್ದಾರೆ.