ಕಿಚ್ಚ ಸುದೀಪ್ ಮತ್ತು ದುನಿಯಾ ಸೂರಿ ಒಂದಾದರೆ ಎಂತಹ ಸಿನಿಮಾ ಸಿದ್ಧವಾಗಬಹುದು..? ರಿಯಲಿಸ್ಟಿಕ್ ಸಿನಿಮಾಗಳನ್ನು ಸಿನಿಮ್ಯಾಟಿಕ್ ಆಗಿ ಹೇಳುವ ಕಲೆ ಸಿದ್ಧಿಸಿಕೊಂಡಿರುವ ಸೂರಿ, ಎಂಥದ್ದೇ ಪಾತ್ರವಾದರೂ ಪರಕಾಯ ಮಾಡಬಲ್ಲ ತಾಕತ್ತಿರುವ ಸುದೀಪ್ ಇಬ್ಬರೂ ಒಂದಾದರೆ, ಒಂದೊಳ್ಳೆ ಸಿನಿಮಾ ಬರೋದು ಫಿಕ್ಸ್. ಆದರೆ, ಇಬ್ಬರೂ ಇದುವರೆಗೆ ಒಟ್ಟಿಗೇ ಸಿನಿಮಾ ಮಾಡಿಲ್ಲ. ರಂಗ ಎಸ್‍ಎಸ್‍ಎಲ್‍ಸಿ ಚಿತ್ರದಲ್ಲಿ ಸೂರಿ ಕೆಲಸ ಮಾಡಿದ್ದರೂ, ನಿರ್ದೇಶಕರಾಗಿದ್ದವರು ಯೋಗರಾಜ್ ಭಟ್. ಈಗ ಕಾಲ ಕೂಡಿ ಬಂದಂತೆ ಕಾಣುತ್ತಿದೆ.
ಒಂದರ ಹಿಂದೊಂದು ಪ್ರಾಜೆಕ್ಟ್‍ಗಳಲ್ಲಿ ಬ್ಯುಸಿಯಾಗಿರುವ ಸುದೀಪ್‍ರನ್ನು, ಮಂಕಿ ಟೈಗರ್ ಚಿತ್ರದ ಬ್ಯುಸಿ ಶೆಡ್ಯೂಲ್ ನಡುವೆಯೇ ಭೇಟಿ ಮಾಡಿದ್ದಾರೆ ಸೂರಿ. ಮೊದಲ ಹಂತದ ಮಾತುಕತೆ ನಡೆದಿದೆ. ಬಹುತೇಕ ಕೆ.ಪಿ.ಶ್ರೀಕಾಂತ್ ನಿರ್ಮಾಪಕರಾಗುವ ಸಾಧ್ಯತೆ ಇದೆ.
ಭೇಟಿಯಾಗಿರುವುದು ನಿಜ. ಮಾತುಕತೆ ನಡೆದಿರುವುದೂ ನಿಜ. ಆದರೆ, ಎಲ್ಲವೂ ಪ್ರಾಥಮಿಕ ಹಂತದಲ್ಲೇ ಇದೆ. ಈಗಲೇ ಫೈನಲ್ ಎನ್ನಲು ಸಾಧ್ಯವಿಲ್ಲ ಎಂದಿದ್ದಾರೆ ಶ್ರೀಕಾಂತ್. ಫೈನಲ್ ಆಗಲಿ ಎನ್ನುವುದು ಅಭಿಮಾನಿಗಳ ನಿರೀಕ್ಷೆ.