ಮನೆ ಮಾರಾಟಕ್ಕಿದೆ. ಇದು ಹೊಸ ಸಿನಿಮಾ. ದೆವ್ವಗಳಿವೆ ಎಚ್ಚರಿಕೆ, ಇದು ಟ್ಯಾಗ್‍ಲೈನ್. ನಾತಿಚರಾಮಿ ನಂತರ ನಾಪತ್ತೆಯಾಗಿದ್ದ ಶ್ರುತಿ ಹರಿಹರನ್ ಮತ್ತೊಮ್ಮೆ ಬರುತ್ತಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದ ಹೊಸ ಚಿತ್ರದಲ್ಲಿ ಹೀರೋಯಿನ್ ಆಗಿದ್ದಾರೆ.
ಹಾರರ್ ಥ್ರಿಲ್ಲರ್ ಚಿತ್ರವಾಗಿರುವ ಮನೆ ಮಾರಾಟಕ್ಕಿದೆ ಸಿನಿಮಾದಲ್ಲಿ ಕಾರುಣ್ಯ ರಾಮ್, ಇನ್ನೊಬ್ಬ ಹೀರೋಯಿನ್. ಸಾಧು ಕೋಕಿಲ, ಚಿಕ್ಕಣ್ಣ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.