` ಅಬ್ಬಾ.. ಅಮೆರಿಕದಲ್ಲಿ ವಿಜಯ್ ಪ್ರಕಾಶ್‍ಗೆ ಅದ್ಭುತ ಗೌರವ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
honor to singer vijay prakash in united states
Vijay Prakash

ಗಾಯಕ ವಿಜಯ್ ಪ್ರಕಾಶ್ ಗಾನ ಮಾಧುರ್ಯಕ್ಕೆ ಮನ ಸೋಲದವರಿಲ್ಲ. ಎಂಥದ್ದೇ ಹಾಡಿರಲಿ, ತಮ್ಮ ಕಂಠದ ಮೂಲಕ ಅದಕ್ಕೊಂದು ವಿಶೇಷ ಹೊಳಪು ನೀಡುವ ವಿಜಯ್ ಪ್ರಕಾಶ್‍ಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಕಾಶಿ ವಿಶ್ವನಾಥ ದೇಗುಲದಲ್ಲಿ ಮೊದಲಿಗೆ ಮೊಳಗುವ ಶಿವನಾಮ ಪೂಜೆಯ ಹಾಡು, ವಿಜಯ್ ಪ್ರಕಾಶ್ ಅವರದ್ದೇ.

ಈಗ ಅದಕ್ಕಿಂತಲೂ ದೊಡ್ಡ ಇನ್ನೊಂದು ಗೌರವ ಅಮೆರಿಕದಲ್ಲಿ ಸಂದಿದೆ. ಅಮೆರಿಕದ ದಕ್ಷಿಣ ಕರೊಲಿನಾ ಪ್ರಾಂತ್ಯದ ಕಾನ್‍ಕಾರ್ಡ್ ನಗರದ ಮೇಯರ್ ವಿಲಿಯಮ್ ಸಿ.ಡಷ್, ಮೇ 12ನ್ನು ವಿಜಯ್ ಪ್ರಕಾಶ್ ಡೇ ಎಂದು ಘೋಷಿಸಿದ್ದಾರೆ.

ಮೇ 12 ರಂದು ವಿಜಯ್ ಪ್ರಕಾಶ್, ಅಮೆರಿಕದ ಕಾನ್‍ಕಾರ್ಡ್‍ನಲ್ಲಿ ಮ್ಯೂಸಿಕ್ ಶೋ ನಡೆಸಿಕೊಟ್ಟಿದ್ದರು. ವಿಜಯ್ ಪ್ರಕಾಶ್ ಹಾಡಿಗೆ ಮನಸೋತ ಮೇಯರ್, ಆ ದಿನವನ್ನು ವಿಜಯ್ ಪ್ರಕಾಶ್ ಡೇ ಎಂದು ಘೋಷಿಸಿದ್ದಾರೆ.

Shivarjun Movie Gallery

Popcorn Monkey Tiger Movie Gallery