` ಲವ್ ಮಾಡಿದ ಹುಡುಗ ಮಂಗಳಮುಖಿಯಾಗಿಬಿಟ್ಟರೆ.. ವಾಟ್ ನೆಕ್ಸ್ಟ್..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
uniue under world love story is hafta
Hafta Movie Image

ಅವನು ಅವಳನ್ನು ಪ್ರೀತಿಸುತ್ತಾನೆ. ಅವಳೂ ಅವನನ್ನು ಪ್ರೀತಿಸುತ್ತಾಳೆ. ಅವನು ಇದ್ದಕ್ಕಿದ್ದಂತೆ ಮಂಗಳಮುಖಿಯಾಗಿಬಿಡುತ್ತಾನೆ. ಹುಡುಗಿಗೆ ಆಘಾತ.. ಇದು ಹಫ್ತಾ ಚಿತ್ರದ ಲವ್‍ಟ್ರ್ಯಾಕ್. ಚಿತ್ರದಲ್ಲಿ ಕೇವಲ ಕರಾವಳಿ ಭೂಗತ ಜಗತ್ತಿನ ಕಥೆಯಷ್ಟೆ ಅಲ್ಲ, ಅಲ್ಲೊಂದು ವಿಚಿತ್ರ ಎನಿಸುವ ಸುಂದರ ಪ್ರೇಮಕಥೆಯೂ ಇದೆ.

ಚಿತ್ರದ ಹೀರೋ ವರ್ಧನ್ ತೀರ್ಥಹಳ್ಳಿ, ಚಿತ್ರರಂಗಕ್ಕೆ ಬಂದು 12 ವರ್ಷಗಳ ನಂತರ ಹೀರೋ ಆಗಿದ್ದಾರೆ. ರಫ್ & ಟಫ್ ಶಾರ್ಪ್ ಶೂಟರ್, ಅರ್ಧನಾರೀಶ್ವರ ಮತ್ತು ಮಂಗಳಮುಖಿಯ ಪಾತ್ರದಲ್ಲಿ ನಟಿಸಿದ್ದಾರೆ. 

ಉಗ್ರಂ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಬಂದು ಹೋದರೂ ಕೆಲವೇ ನಿಮಿಷಗಳಲ್ಲಿ ಗಮನ ಸೆಳೆದಿದ್ದರು. ಅದೇ ನನ್ನನ್ನು ಆಕರ್ಷಿಸಿತು. ಹೀಗಾಗಿ ಅವರನ್ನು ಈ ಚಿತ್ರಕ್ಕೆ ಹೀರೋ ಆಗಿ ಆಯ್ಕೆ ಮಾಡಿಕೊಂಡೆ ಎನ್ನುತ್ತಾರೆ ನಿರ್ದೇಶಕ ಪ್ರಕಾಶ್ ಹೆಬ್ಬಾಳ.

ಚಿತ್ರದಲ್ಲಿ ರಾಘವ ನಾಗ್ ಇನ್ನೊಬ್ಬ ಹೀರೋ. ಬಿಂಬಶ್ರೀ ಹೀರೋಯಿನ್. ಇದೇ ವಾರ ರಿಲೀಸ್ ಆಗುತ್ತಿರುವ ಹಫ್ತಾ ಚಿತ್ರದ ಟ್ರೇಲರ್ ಕುತೂಹಲ ಹುಟ್ಟಿಸಿದೆ.

Matthe Udbhava Trailer Launch Gallery

Maya Bazaar Pressmeet Gallery