ಕನ್ನಡದ ಪ್ರಮುಖ ಸಾಹಿತಿ, ಪತ್ರಕರ್ತ, ಅಂಕಣಕಾರ, ಕಥೆಗಾರ, ಕಾದಂಬರಿಕಾರ... ಎಲ್ಲವೂ ಆಗಿರುವ ಗಿರೀಶ್ ರಾವ್ ಹತ್ವಾರ್ ಅಲಿಯಾಸ್ ಜೋಗಿಯವರ ಕಾದಂಬರಿಯೊಂದು ಸಿನಿಮಾ ಆಗುತ್ತಿದೆ. ಜೋಗಿಯವರ ನದಿಯ ನೆನಪಿನ ಹಂಗು ಕೃತಿಯನ್ನು ಸಿನಿಮಾ ರೂಪಕ್ಕಿಳಿಸಿದ್ದಾರೆ ನಿರ್ದೇಶಕ ರಾಜ್‍ಗುರು.
ಇದೇ ಕಾದಂಬರಿಯನ್ನು ಆಧರಿಸಿ, ಬಲ್ಲ ಮೂಲಗಳ ಪ್ರಕಾರ ಎಂಬ ನಾಟಕವನ್ನೂ ರಂಗದ ಮೇಲೆ ತರಲಾಗಿತ್ತು. ಕಾದಂಬರಿ ಓದಿ ಇಷ್ಟಪಟ್ಟ ರಾಹುಲ್, ರಂಜಿತ್ ಮತ್ತು ಪ್ರವೀಣ್ ಎಂಬ ಮೂವರು ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ರಾಹುಲ್ ನಾಯಕನಾಗಿಯೂ ನಟಿಸಿದ್ದಾರೆ. ಪ್ರಕೃತಿ ಎಂಬ ಚೆಲುವೆ ಚಿತ್ರಕ್ಕೆ ನಾಯಕಿ.
ಒಂದು ಕೊಲೆಯ ಸುತ್ತ ಸಾಗುವ ಕಥೆಯಿದು. ಇದು ತುಂಬಾ ಕಡೆ ನಿಮ್ಮನ್ನು ಕನ್ವಿನ್ಸ್ ಮಾಡುತ್ತೆ. ಕನ್ವಿನ್ಸ್ ಆಗದೇ ಹೋದಾಗ ಕನ್‍ಫ್ಯೂಸ್ ಮಾಡುತ್ತೆ. ಅದೇ ಈ ಕಥೆಗಿರುವ ಶಕ್ತಿ ಎನ್ನುತ್ತಾರೆ ರಾಜ್‍ಗುರು.