` ಡೋಂಟ್‍ವರಿ, ಇದು ಮೈನರ್ ಆಪರೇಷನ್ - ಶಿವಣ್ಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivanna talks about his operations
Shivarajkumar

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಲಂಡನ್‍ನಲ್ಲಿ ಮುಂದಿನ ತಿಂಗಳು ಆಪರೇಷನ್ ಮಾಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಬಾರಿಯ ಹುಟ್ಟುಹಬ್ಬಕ್ಕೆ ಶಿವಣ್ಣ ಊರಿನಲ್ಲಿರೋದಿಲ್ಲ. ಆಪರೇಷನ್ ಎಂದ ಕೂಡಲೇ ಗಾಬರಿಯಾಗುವ ಅಭಿಮಾನಿಗಳಿಗೆ ಶಿವಣ್ಣ ಅವರೇ ಧೈರ್ಯ ಹೇಳಿದ್ದಾರೆ.

ಹಲವು ದಿನಗಳ ಹಿಂದೆ ಚಿತ್ರೀಕರಣದ ವೇಳೆ ಆಗಿದ್ದ ಗಾಯವದು. ಪದೇ ಪದೇ ತೊಂದರೆ ಕೊಡುತ್ತಲೇ ಇದೆ. ನಾರ್ಮಲ್ ಆಗಿ ತೊಂದರೆ ಇಲ್ಲದೇ ಹೋದರೂ, ಕೆಲವೊಮ್ಮೆ ತೀವ್ರವಾಗಿ ಕಾಡುತ್ತೆ. ಹೀಗಾಗಿ ಪರಿಚಿತ ವೈದ್ಯರ ಸಲಹೆ ಮೇರೆಗೆ ಲಂಡನ್‍ನ ತಜ್ಞ ವೈದ್ಯರ ಬಳಿ ಆಪರೇಷನ್‍ಗೆ ಒಳಗಾಗುತ್ತಿದ್ದೇನೆ. ಇದೊಂದು ಪುಟ್ಟ ಆಪರೇಷನ್ ಎಂದಿದ್ದಾರೆ ಶಿವಣ್ಣ.

ಶಸ್ತ್ರಚಿಕಿತ್ಸೆ ನಂತರ ಕನಿಷ್ಠ 20 ದಿನ ಬೆಡ್‍ರೆಸ್ಟ್ ಮಾಡಬೇಕಿರುವ ಶಿವಣ್ಣ, ನಂತರ ಎಂದಿನಂತೆ ಶೂಟಿಂಗ್‍ಗೆ ಬರಲಿದ್ದಾರೆ. 

Geetha Movie Gallery

Damayanthi Teaser Launch Gallery