ರಾಧಿಕಾ ಪಂಡಿತ್ ತೆರೆಯ ಮೇಲೆ ಕಾಣಿಸಿಕೊಂಡು ಹೆಚ್ಚೂ ಕಡಿಮೆ 3 ವರ್ಷ. ಮದುವೆ.. ಬಾಣಂತನ, ಕಂದನ ಆರೈಕೆಗಳಲ್ಲೇ ಮುಳುಗಿಹೋಗಿದ್ದ ರಾಧಿಕಾ ಪಂಡಿತ್ ಮತ್ತೆ ಬರುತ್ತಿದ್ದಾರೆ. ಅಫ್‍ಕೋರ್ಸ್, ಇದು ಯಶ್ ಮದುವೆಯಾದ ಮೇಲೆ ಅವರು ನಟಿಸಿದ್ದ ಸಿನಿಮಾ. ಆದಿಲಕ್ಷ್ಮೀ ಪುರಾಣ.
ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಹೀರೋ.
ಮಣಿರತ್ನಂ ಅವರ ಬಳಿ ಅಸಿಸ್ಟೆಂಟ್ ಆಗಿದ್ದ ಪ್ರಿಯಾ ಈ ಚಿತ್ರದ ನಿರ್ದೇಶಕಿ. ಚಿತ್ರದ ಬಿಡುಗಡೆಗೆ ವ್ಯವಸ್ಥೆಗಳಾಗುತ್ತಿದ್ದು, ಜೂನ್ 21ಕ್ಕೆ ಆದಿಲಕ್ಷ್ಮೀ ಪುರಾಣದ ಆಡಿಯೋ ರಿಲೀಸ್ ಆಗಲಿದೆ. ಜುಲೈನಲ್ಲಿ ಸಿನಿಮಾ ತೆರೆ ಮೇಲೆ ಬರಲಿದೆ.