` 52 ವರ್ಷಗಳ ಮಂಡ್ಯ ಸೃಷ್ಟಿಸಿದ ಇತಿಹಾಸ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sumalatha creates history
Sumalatha Amabreesh wins Lok Sabha Elections

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಗೆದ್ದರು. ನಿಖಿಲ್ ಸೋತರು. ಆದರೆ, ಈ ಗೆಲುವಿನಲ್ಲಿ ಸುಮಲತಾ ಅಂಬರೀಷ್ ಹೊಸ ಹೊಸ ದಾಖಲೆಗಳನ್ನೇ ಸೃಷ್ಟಿಸಿದ್ದಾರೆ.

ಸುಮಲತಾ ಈಗ ಇಡೀ ದೇಶದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು, ಲೋಕಸಭೆ ಪ್ರವೇಶಿಸುತ್ತಿರುವ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇದು ಇಂಡಿಯಾದಲ್ಲೇ ಪ್ರಪ್ರಥಮ.

ಇನ್ನು ಲೋಕಸಭೆಗೆ ಪಕ್ಷೇತರರಾಗಿ ಗೆದ್ದು ಬಂದವರಿದ್ದಾರೆ. ಕರ್ನಾಟಕದಲ್ಲಿ 1950ರ ದಶಕದಲ್ಲಿ ಒಮ್ಮೆ ಪಕ್ಷೇತರರು ಗೆದ್ದಿದ್ದರು. ಅದಾದ ಬಳಿಕ, ಲೋಕಸಭೆಗೆ ಕರ್ನಾಟಕದಿಂದ ಪಕ್ಷೇತರರು ಹೋಗುತ್ತಿರುವುದು ಇದೇ ಮೊದಲು. 

1957ರಲ್ಲಿ ವಿಜಯಪುರದಿಂದ ಸುಗಂಧಿ ಮುರುಗಪ್ಪ ಸಿದ್ದಪ್ಪ ಎಂಬುವರು ಗೆದ್ದಿದ್ದರು. ಅದಾದ ನಂತರ 1967ರಲ್ಲಿ ದಿನಕರ ದೇಸಾಯಿ  ಗೆದ್ದಿದ್ದರು. ಅದೇ ಕೊನೆ, 52 ವರ್ಷಗಳ ನಂತರ ಮಂಡ್ಯದಿಂದ ಇತಿಹಾಸ ಸೃಷ್ಟಿಯಾಗಿದೆ.

ಇನ್ನು ಸುಮಲತಾ ವಿರುದ್ಧ ಪ್ರಚಾರ ಮಾಡಿದ ಘಟಾನುಘಟಿಗಳ ವಿವರ ಬೇಡ. ಅಷ್ಟು ದೊಡ್ಡ ಸೈನ್ಯದ ವಿರುದ್ಧ, ಯಾವುದೇ ಶಾಸಕ, ಸಚಿವ, ಅಧಿಕೃತ ಪಕ್ಷ, ಕಾರ್ಯಕರ್ತರ ಬೆಂಬಲವಿಲ್ಲದೆ, ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಗೆದ್ದಿದ್ದು ಹೊಸ ದಾಖಲೆಯೇ ಸರಿ.