ನಟ ಯಶ್, ವಿವಾದದ ಗೂಡಾಗಿದ್ದ ಬನಶಂಕರಿಯಲ್ಲಿ ಬಾಡಿಗೆಗೆ ಇದ್ದ ಮನೆಯನ್ನು ಖಾಲಿ ಮಾಡಿದೆ. ಮಾಲೀಕರಿಗೆ ಕೊಡಬೇಕಿದ್ದ ಬಾಡಿಗೆ ಹಣವನ್ನು ಡಿಡಿ ಮೂಲಕವೇ ನೀಡಲಾಗಿದೆ. ಆದರೆ, ವಿವಾದ ಇಷ್ಟಕ್ಕೇ ಮುಗಿದಿಲ್ಲ.
ಯಶ್ ಮನೆಯವರು ಮನೆಯನ್ನು ತುಂಬಾ ಹಾಳು ಮಾಡಿದ್ದಾರೆ. ಉಪಯೋಗಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಧಕ್ಕೆ ಮಾಡಿದ್ದಾರೆ. ಹೀಗಾಗಿ ಯಶ್ ಕುಟುಂಬದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಮನೆ ಮಾಲೀಕರು ನಿರ್ಧರಿಸಿದ್ದಾರೆ ಎಂದು ಮನೆ ಮಾಲೀಕರ ಪರ ವಕೀಲ ಎಂ.ಟಿ.ನಾಣಯ್ಯ ತಿಳಿಸಿದ್ದಾರೆ.