ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಶುರುವಾಗಿ ಬಹಳ ದಿನಗಳೇ ಆಗಿವೆ. ಹೀರೋ ಹೊರತುಪಡಿಸಿ, ಉಳಿದ ಭಾಗಗಳ ಚಿತ್ರೀಕರಣ ಬಹುತೇಕ ಮುಗಿಯುವ ಹಂತದಲ್ಲಿದೆ. ಆದರೆ, ಯಶ್ ಇನ್ನೂ ಶೂಟಿಂಗ್ ಸೆಟ್‍ಗೆ ಹಾಜರಾಗಿಲ್ಲ. ಅಫ್‍ಕೋರ್ಸ್, ಅದಕ್ಕೆ ಯಶ್ ಒಬ್ಬರೇ ಕಾರಣರಲ್ಲ.
ಚಿತ್ರದ ಕೆಲವು ತಾಂತ್ರಿಕ ಕೆಲಸಗಳು ಹಾಗೂ ತುರ್ತು ವೈಯಕ್ತಿಕ ಕೆಲಸಗಳ ಹಿನ್ನೆಲೆಯಲ್ಲಿ ಜೂನ್ 6ಕ್ಕೆ ಬರಬೇಕಿದ್ದ ಯಶ್, ಶೂಟಿಂಗ್ ಟೀಂ ಸೇರೋಕೆ ಸಾಧ್ಯವಾಗಲಿಲ್ಲ. ಈಗ ಕನ್ಫರ್ಮ್ ಆಗಿದೆ. ಜೂನ್ 12ರಿಂದ ಅಂದರೆ, ಇದೇ ಗುರುವಾರದಿಂದ ಯಶ್ ಕೆಜಿಎಫ್ ಚಾಪ್ಟರ್ 2 ತಂಡ ಸೇರಲಿದ್ದಾರೆ.
ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈಗಾಗಲೇ 15 ದಿನಗಳ ಚಿತ್ರೀಕರಣವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ, ಮೊದಲ ಭಾಗದ ಅದ್ಧೂರಿ ಯಶಸ್ಸಿನಿಂದಾಗಿಯೇ ಕುತೂಹಲ ಮೂಡಿಸಿದೆ.