ದರ್ಶನ್ ಅಭಿನಯದ ಥೀಮ್ ಪೋಸ್ಟರ್ ಹೊರಬಿದ್ದಿದೆ. ಸದಾ ಶಾರ್ಟ್ ಹೇರ್‍ಕಟ್‍ನಲ್ಲಿರುತ್ತಿದ್ದ ದರ್ಶನ್, ಈ ಚಿತ್ರದಲ್ಲಿ ಉದ್ದ ಕೂದಲು ಬಿಟ್ಟಿದ್ದಾರೆ. ಫೇಸ್ ಗೆಟಪ್ ಬದಲಾಗಿದೆಯಾ..? ಯಾರಿಗ್ಗೊತ್ತು... ತರುಣ್ ಸುಧೀರ್ ದರ್ಶನ್ ಮುಖವನ್ನೇ ತೋರಿಸಿಲ್ಲ.
ಪೋಸ್ಟರ್‍ನಲ್ಲಿ ಕೆ3 19, ಡಿ 8055 ಬೈಕ್‍ನಲ್ಲಿ ದರ್ಶನ್ ಕುಳಿತಿರುವ ಚಿತ್ರವದು. ಕೆಎ 19, ಮಂಗಳೂರಿನ ರಿಜಿಸ್ಟ್ರೇಷನ್ ನಂಬರ್. ಡಿ 8055 ಅಂದ್ರೆ ಡಿ ಬಾಸ್ ಎಂದರ್ಥ.
ಉಮಾಪತಿ ನಿರ್ಮಾಣದ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಹೀರೋಯಿನ್ ಇನ್ನೂ ಅಂತಿಮವಾಗಿಲ್ಲ.
ಚಿತ್ರದ ಕಥೆ ಏನು..? ದರ್ಶನ್ ಪಾತ್ರ ಏನಿರಬಹುದು..? ಇವುಗಳ ಬಗ್ಗೆ ಥೀಮ್ ಪೋಸ್ಟರ್‍ನಲ್ಲಿ ಸುಳಿವು ಕೊಟ್ಟಿದ್ದಾರಂತೆ ನಿರ್ದೇಶಕರು. ನಿಮಗೇನಾದ್ರೂ ಗೊತ್ತಾಯ್ತಾ..?