` ಶೆರ್ಲಾಕ್ ಹೋಮ್ಸ್, ಚುಲ್‍ಬುಲ್ ಪಾಂಡೆ.. ಎಲ್ಲವೂ ಅವನೇ ಶ್ರೀಮನ್ನಾರಾಯಣ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sherlock homes and chulbul pandey is avane srimannarayana
Avanr Srimannarayana

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ಟೀಸರ್ ಹೊರಬಿದ್ದ ಹೊತ್ತಲ್ಲೇ, ಚಿತ್ರದಲ್ಲಿನ ತಮ್ಮ ಕ್ಯಾರೆಕ್ಟರ್ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ಚಿತ್ರದಲ್ಲಿ ಇಂಟೆಲಿಜೆಂಟ್ ಪೊಲೀಸ್ ಕ್ಯಾರೆಕ್ಟರ್ ಮಾಡಿರುವ ರಕ್ಷಿತ್ ಶೆಟ್ಟಿ, ಡಿಫರೆಂಟ್ ಗೆಟಪ್‍ನಲ್ಲಿ ಕಂಗೊಳಿಸಿದ್ದಾರೆ.

ಚಿತ್ರದಲ್ಲಿನ ನಾರಾಯಣನ ಪಾತ್ರಕ್ಕೆ ಹಲವು ಶೇಡ್‍ಗಳಿವೆ. ಅವನು ಶೆರ್ಲಾಕ್ ಹೋಮ್ಸ್, ಜ್ಯಾಕ್ ಸ್ಪ್ಯಾರೋ ಹಾಗೂ ದಬ್ಬಾಂಗ್ ಚುಲ್‍ಬುಲ್ ಪಾಂಡೆಯ ಮಿಕ್ಸಿಂಗ್. ಚಿತ್ರದಲ್ಲಿ ನಾನೊಬ್ಬ ಇನ್ಸ್‍ಪೆಕ್ಟರ್. ನನಗಿಬ್ಬರು ಸಬಾರ್ಡಿನೇಟ್ಸ್. ಆ  ಸ್ಟೇಷನ್‍ಗೆ ನಾನೇ ಬಾಸ್. ನನ್ನನ್ನು ಪ್ರಶ್ನಿಸುವ ಅಧಿಕಾರಿಯೂ ಇರಲ್ಲ. ಹೀಗಿರುವಾಗ.. ಮುಂದಿನದ್ದನ್ನು ಸಿನಿಮಾದಲ್ಲೇ ನೋಡಿ..

ಹೀಗೆ ರಕ್ಷಿತ್ ಶೆಟ್ಟಿ, ಗುಟ್ಟನ್ನು ಬಿಟ್ಟು ಕೊಟ್ಟು, ಸ್ವಲ್ಪವೂ ಬಿಟ್ಟುಕೊಡದೆ ಕುತೂಹಲ ಹುಟ್ಟಿಸಿಯೇ ಸಾಗುತ್ತಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ ಹೀರೋಯಿನ್. ಸಚಿನ್ ನಿರ್ದೇಶನದ ಚಿತ್ರ ವರಮಹಾಲಕ್ಷ್ಮಿ ಹಬ್ಬದಂದು ತೆರೆ ಕಾಣಲಿದೆ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery