ಕಿರಿಕ್ ಪಾರ್ಟಿ, ಸಹಿಪ್ರಾಶಾದಂತಹ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟು ಗೆದ್ದ ನಿರ್ದೇಶಕ ರಿಷಬ್ ಶೆಟ್ಟಿ, ಬೆಲ್‍ಬಾಟಂ ಮೂಲಕ ಹೀರೋ ಆಗಿಯೂ ಮಿಂಚಿದರು. ಈಗ ಯೆಸ್ ಎಂದರೆ, ನಟ ರಿಷಬ್ ಕೈತುಂಬಾ ಸಿನಿಮಾಗಳು ತುಂಬಿ ತುಳುಕಲಿವೆ. ಆದರೆ, ನಾಥೂರಾಂ ಚಿತ್ರದಲ್ಲಿ ಬ್ಯುಸಿಯಾಗಿರುವ ರಿಷಬ್, ಮತ್ತೆ ನಿರ್ದೇಶನದತ್ತ ಮನಸ್ಸು ಮಾಡಿದ್ದಾರೆ.
ಈ ಬಾರಿ ರಿಷಬ್ ಶೆಟ್ಟಿ, ಜಯಣ್ಣ ಕಂಬೈನ್ಸ್‍ನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದು, ಶೀಘ್ರದಲ್ಲೇ ಪ್ರಕಟಣೆ ಹೊರಬೀಳಲಿದೆ.