` ಪ್ರಿಯಾಮಣಿ.. 56 ಅಂದ್ರೆ 56. ಡಾ.56 - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dr 56 motion poster
Dr 56 Motion Poster

ಡಾ.56. ಇದು ಪ್ರಿಯಾಮಣಿ ಅಭಿನಯಿಸುತ್ತಿರುವ ಹೊಸ ಸಿನಿಮಾ. ರಾಜೇಶ್ ಆನಂದ ಲೀಲಾ ನಿರ್ದೇಶನದ ಈ ಸಿನಿಮಾದ ಕಾಕತಾಳೀಯ ವಿಚಿತ್ರ, ವಿಶೇಷ, ವಿಸ್ಮಯ ಎಂದರೆ, ಇದು ಪ್ರಿಯಾಮಣಿ ಅವರ 56ನೇ ಸಿನಿಮಾವೂ ಹೌದು. ಹಾಗಂತ ಇದೇನೂ ದಿಢೀರ್ ಆಗಿದ್ದಲ್ಲ. ಡಾ.56 ಅನ್ನೋ ಟೈಟಲ್‍ನ್ನು 2 ವರ್ಷ ಹಿಂದೆಯೇ ರಿಜಿಸ್ಟರ್ ಮಾಡಲಾಗಿತ್ತು.

ಇದೊಂದು ಸೈನ್ಸ್ ಫಿಕ್ಷನ್ ಸಿನಿಮಾ ಆಗಿದ್ದು, ನಂಬರ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತೆ ಎನ್ನುತ್ತಾರೆ ನಿರ್ದೇಶಕರು. ನಾಳೆ ಅಂದರೆ ಜೂನ್ 6ರಂದು ಪ್ರಿಯಾಮಣಿ ಜನ್ಮದಿನ. ಅದಕ್ಕೆಂದೇ ವಿಶೇಷ ಪೋಸ್ಟರ್ ರಿಲೀಸ್ ಆಗುತ್ತಿದೆ.