` ಉಪ್ಪಿ-ರಚಿತಾ ಬೋಲ್ಡ್ ಸೀನ್ಸ್ ಸೀಕ್ರೆಟ್ ಬಿಚ್ಚಿಟ್ಟ ನಿರ್ದೇಶಕ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
director r chandru talks about the bold scenes in the movie
R Chandru

ಉಪೇಂದ್ರ ಮತ್ತು ರಚಿತಾ ರಾಮ್, ಇದೇ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ಚಿತ್ರ ಐ ಲವ್ ಯೂ. ರಚಿತಾ ರಾಮ್ ಇದೇ ಮೊದಲ ಬಾರಿಗೆ ಉಪೇಂದ್ರ ಜೊತೆ ಇಷ್ಟೊಂದು ರೊಮ್ಯಾಂಟಿಕ್ ಆಗಿ ನಟಿಸಿದ್ದು, ಹಲವರ ಹುಬ್ಬೇರಿಸಿದೆ. ಇಷ್ಟಕ್ಕೂ ಇಷ್ಟೊಂದು ಬೋಲ್ಡ್‍ನೆಸ್ ಬೇಕಿತ್ತಾ ಎಂದರೆ, ನಿರ್ದೇಶಕ ಆರ್.ಚಂದ್ರು ಹೇಳೋದಿಷ್ಟು.

`ಸಿನಿಮಾಗೆ, ಕಥೆಗೆ ಅಂತಹ ದೃಶ್ಯಗಳ ಅವಶ್ಯಕತೆ ಇತ್ತು. ಸಿನಿಮಾ ನೋಡಿದರೆ, ಅದು ನಿಮಗೆ ಅರ್ಥವಾಗುತ್ತೆ. ಜನ ಖಂಡಿತಾ ಆ ದೃಶ್ಯಗಳ ತೀವ್ರತೆ ಅರ್ಥ ಮಾಡಿಕೊಳ್ಳುತ್ತಾರೆ' ಎಂದಿದ್ದಾರೆ ಚಂದ್ರು.

ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಐ ಲವ್ ಯೂ, ಕರ್ನಾಟಕ, ಆಂಧ್ರ, ತೆಲಂಗಾಣಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಉಪ್ಪಿ ಜೊತೆ ಇನ್ನೊಬ್ಬ ನಾಯಕಿಯಾಗಿ ಸೋನು ಗೌಡ ಕೂಡಾ ನಟಿಸಿದ್ದಾರೆ. ಸೋನು ಗೌಡ ಪಾತ್ರದ ರಹಸ್ಯವನ್ನು ಟ್ರೇಲರ್‍ಗಳಲ್ಲಿ ಹೆಚ್ಚು ತೋರಿಸದೆ, ಗುಟ್ಟಾಗಿಯೇ ಇಟ್ಟಿದ್ದಾರೆ ಚಂದ್ರು. ಈ ಕಾರಣಕ್ಕೇ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery