` ರಾಮ್‍ಕುಮಾರ್ ಮಗಳು ಹೀರೋಯಿನ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dhanya ramkumar to enter films
Dhanya Ramkumar

ಒಂದು ಕಡೆ ಮಗ ಧಿರೇನ್ ಕುಮಾರ್‍ರನ್ನು ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿರುವಾಗಲೇ, ರಾಮ್‍ಕುಮಾರ್ ಮಗಳೂ ಕೂಡಾ ಚಿತ್ರರಂಗಕ್ಕೆ ಬಲಗಾಲಿಟ್ಟಿದ್ದಾರೆ. ರಾಮ್ ಕುಮಾರ್ ಮಗಳು ಧನ್ಯಾ, ಸೂರಜ್ ಗೌಡಗೆ ಹೀರೋಯಿನ್ ಆಗಿದ್ದಾರೆ. ಮದುವೆಯ ಮಮತೆಯ ಕರೆಯೋಲೆ, ಕಹಿ, ಸಿಲಿಕಾನ್ ಸಿಟಿ ಚಿತ್ರಗಳ ನಂತರ ಸೂರಜ್ ನಟಿಸುತ್ತಿರುವ ಸಿನಿಮಾ ಇದು.

ಹೊಸ ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಕಥೆ ಸೂರಜ್ ಗೌಡ ಅವರದ್ದೇ. ಸುಮನ್ ಜಾದೂಗಾರ್ ಎಂಬ ಹೊಸ ಪ್ರತಿಭೆ ಚಿತ್ರದ ನಿರ್ದೇಶಕ. ರಘು ದೀಕ್ಷಿತ್ ಸಂಗೀತ ನೀಡುತ್ತಿದ್ದು, ಜುಲೈನಲ್ಲಿ ಸಿನಿಮಾ ಶೂಟಿಂಗ್ ಶುರುವಾಗಲಿದೆ.

Mugilpete Shooting Pressmeet In Sakleshpura

Odeya Audio Launch Gallery