ವರಮಹಾಲಕ್ಷ್ಮಿ ಹಬ್ಬಕ್ಕೆ ದರ್ಶನ್, ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ಚಿತ್ರಗಳು ಒಟ್ಟಿಗೇ ರಿಲೀಸ್ ಆಗುತ್ತಿವೆ ಎಂಬ ಸುದ್ದಿ ಮೊನ್ನೆ ಮೊನ್ನೆಯಷ್ಟೇ ಹೊರಬಿದ್ದಿದೆ. ಈಗ ಅದಕ್ಕೂ ಮೊದಲೇ ಮತ್ತೊಂದು ಸ್ಯಾಂಡಲ್‍ವುಡ್ ಸ್ಟಾರ್‍ವಾರ್ ಜೂನ್‍ನಲ್ಲಿ ನಡೆಯಲಿದೆ.
ಜೂನ್ 14ಕ್ಕೆ ಶಿವಣ್ಣ ಮತ್ತು ಉಪೇಂದ್ರ ಇಬ್ಬರೂ ಮುಖಾಮುಖಿಯಾಗುತ್ತಿದ್ದಾರೆ. ರವಿವರ್ಮ ನಿರ್ದೇಶನದ ರುಸ್ತುಂ ಒಂದು ಕಡೆ ರಿಲೀಸ್ ಆದರೆ, ಆರ್.ಚಂದ್ರು ನಿರ್ದೇಶನದ ಐ ಲವ್ ಯೂ ಕೂಡಾ ಅದೇ ದಿನ ರಿಲೀಸ್ ಘೋಷಿಸಿಕೊಂಡಿದೆ. ವಿಶೇಷವೆಂದರೆ, ಐ ಲವ್ ಯೂನಲ್ಲಿ ರಚಿತಾ ರಾಮ್ ಹೀರೋಯಿನ್ ಆದರೆ, ರುಸ್ತುಂನಲ್ಲಿ ನಾಯಕಿ ಅಲ್ಲದಿದ್ದರೂ, ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.