` ದರ್ಶನ್‍ಗೆ ದರ್ಶನ್ ಅವರೇ ಕೊಡ್ತಾರಾ ಫೈಟು..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
will the month of august be darshan vs darshan
Kurukshetra

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರುಕ್ಷೇತ್ರ ಸಿನಿಮಾ, ಆಗಸ್ಟ್ 9ಕ್ಕೆ ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಆಗ್ತಿದೆ. ಅದೇ ದಿನ ಸುದೀಪ್ ಅಭಿನಯದ ಪೈಲ್ವಾನ್, ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಕೂಡಾ ರಿಲೀಸ್ ಆಗುವ ಸಾಧ್ಯತೆಗಳಿವೆ. ಹೀಗೆ ಆಗಸ್ಟ್ ಸ್ಟಾರ್‍ವಾರ್‍ಗೆ ಸಾಕ್ಷಿಯಾಗಲಿದೆ ಎನ್ನುತ್ತಿರುವಾಗಲೇ, ಅದೇ ತಿಂಗಳು ಇನ್ನೂ ಒಂದು ಸ್ಟಾರ್ ವಾರ್ ಶುರುವಾಗೋ ಸುಳಿವು ಬರ್ತಾ ಇದೆ. 

ಅಚ್ಚರಿಯೆಂಬಂತೆ ಈ ಸ್ಟಾರ್‍ವಾರ್ ಸುಳಿವು ಬರ್ತಿರೋದು ದರ್ಶನ್ ಅವರ ಇನ್ನೊಂದು ಸಿನಿಮಾದ ಕಡೆಯಿಂದ. ದರ್ಶನ್ ಅಭಿನಯದ ಒಡೆಯ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇನ್ನೊಂದು ಹಾಡು ಬಾಕಿ ಇದೆ. ಅದನ್ನೂ ಮುಗಿಸಿ, ಆಗಸ್ಟ್ ಕೊನೆಯ ವಾರದಲ್ಲಿ ತೆರೆಗೆ ತರುವ ಆಲೋಚನೆ ಒಡೆಯ ಚಿತ್ರತಂಡಕ್ಕಿದೆ ಎನ್ನಲಾಗಿದೆ. ಹಾಗೇನಾದರೂ ಆದರೆ, ದರ್ಶನ್ ವರ್ಸಸ್ ದರ್ಶನ್ ಫೈಟ್ ನಡೆಯಲಿದೆ ಅನ್ನೋದ್ರಲ್ಲಿ ಡೌಟಿಲ್ಲ.

Geetha Movie Gallery

Ombattane Dikku Launch Meet Gallery