ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರದಲ್ಲಿ ಈಗಾಗಲೇ ದೊಡ್ಡ ದೊಡ್ಡ ಸ್ಟಾರ್‍ಗಳೇ ಇದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದ್‍ರಾಮ್, ಈಗ ಯಾವ ಸ್ಟಾರ್‍ಗಳಿಗೂ ಕಡಿಮೆಯೇನಲ್ಲ. ಜೊತೆಗೆ ರಾಧಿಕಾ ಶರತ್‍ಕುಮಾರ್, ಡಾಲಿ ಧನಂಜಯ್ ನಟಿಸುತ್ತಿದ್ದಾರೆ. ಸಯೇಷಾ ಸೈಗಲ್ ನಾಯಕಿ.
ಇಷ್ಟೆಲ್ಲ ಸ್ಟಾರ್‍ಗಳ ಜೊತೆ ಇನ್ನೊಬ್ಬರು ಖ್ಯಾತ ಕಲಾವಿದರು ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ. ಅವರ್ಯಾರು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.
ಅಂದಹಾಗೆ ಯುವರತ್ನ ಚಿತ್ರಕ್ಕೆ 10 ಶೆಡ್ಯೂಲ್‍ಗಳಲ್ಲಿ ಒಟ್ಟು 100 ದಿನ ಶೂಟಿಂಗ್ ನಡೆಯಲಿದೆ. ಸದ್ಯಕ್ಕೆ 3 ಹಂತದ ಶೂಟಿಂಗ್ ಮುಗಿದಿದೆ. ಕ್ರಿಸ್‍ಮಸ್‍ಗೆ ಸಿನಿಮಾ ರಿಲೀಸ್ ಮಾಡಲಿದ್ದೇವೆ ಎಂದಿದ್ದಾರೆ ಸಂತೋಷ್ ಆನಂದ್‍ರಾಮ್.