` ಮಧ್ಯರಾತ್ರಿ 12.30ಕ್ಕೆ ಗಣೇಶ್ ಗಿಮಿಕ್ ದೆವ್ವ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ganesh's horro comedy gimmick trailer launched
Gimmick Trailer Launched

ಗೋಲ್ಡನ್ ಸ್ಟಾರ್ ಗಣೇಶ್, ಇದೇ ಮೊದಲ ಬಾರಿಗೆ ಹಾರರ್ ಚಿತ್ರದಲ್ಲಿ ನಟಿಸಿದ್ದಾರೆ. ಅಫ್‍ಕೋರ್ಸ್.. ಈ ಹಾರರ್ ಚಿತ್ರದಲ್ಲಿ ಕಾಮಿಡಿಯೂ ಇದೆ. ಅದೇ ಗಿಮಿಕ್. ಇದು ನಾಗಣ್ಣ ನಿರ್ದೇಶನದ ಸಿನಿಮಾ.

ದೆವ್ವವನ್ನೇ ಕಾಮಿಡಿ ಮಾಡುವ ಪಾತ್ರದಲ್ಲಿ ಗಣೇಶ್, ಗಣೇಶ್‍ಗೆ ಜೋಡಿಯಾಗಿ ರೋನಿಕಾ ಸಿಂಗ್ ನಟಿಸಿದ್ದಾರೆ. ಚಿ.ಗುರುದತ್, ರವಿಶಂಕರ್ ಗೌಡ, ಸಾಧು ಕೋಕಿಲ, ಶೋಭರಾಜ್, ಸುಂದರರಾಜ್.. ಹೀಗೆ ಸೀನಿಯರ್ ಕಲಾವಿದರ ದಂಡೇ ಚಿತ್ರದಲ್ಲಿದೆ.

ಅಂದಹಾಗೆ ಇದು ದಿಲ್ಲುಕು ದುಡ್ಡು ಚಿತ್ರದ ರೀಮೇಕ್. 2016ರಲ್ಲಿ ಸಂತಾನಂ ನಟಿಸಿದ್ದ ಚಿತ್ರವನ್ನು ರೀಮೇಕ್ ಮಾಡಲಾಗಿದೆ. ಟ್ರೇಲರ್‍ನ್ನು ದೆವ್ವದ ಸಮಯ ಎಂದೇ ನಂಬಲಾಗಿರುವ ಮಧ್ಯರಾತ್ರಿ 12.30ಕ್ಕೇ ರಿಲೀಸ್ ಮಾಡಿದ್ದು ವಿಶೇಷ. ಆದರೆ, ಸಿನಿಮಾ ಮಾತ್ರ ಮಾರ್ನಿಂಗ್ ಶೋನಲ್ಲೇ ರಿಲೀಸ್ ಆಗುತ್ತೆ. ವೇಯ್ಟ್ ಮಾಡಿ. ಭಯ ಪಡಿ. 

Kaalidasa Kannada Mestru Movie Gallery

Kabza Movie Launch Gallery