` ಇಶಾನ್‍ಗೆ ಪವನ್ ಒಡೆಯರ್ ಡೈರೆಕ್ಷನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
pavan wadeyar to direct ishaan
Pavan Wadeyar, Ishaan

ನಿರ್ಮಾಪಕ ಸಿ.ಆರ್.ಮನೋಹರ್ ಫ್ಯಾಮಿಲಿ ಹುಡುಗ ಇಶಾನ್, ರೋಗ್ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ನಟ. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಬಂದಿದ್ದ ರೋಗ್ ಚಿತ್ರ, ಕನ್ನಡ ಮತ್ತು ತೆಲುಗಿನಲ್ಲಿ ಸದ್ದು ಮಾಡಿದ್ದ ಸಿನಿಮಾ. ರೋಗ್ ಚಿತ್ರದಲ್ಲಿ ನಟನೆ, ಆ್ಯಕ್ಷನ್‍ಗಳಿಂದ ಗಮನ ಸೆಳೆದಿದ್ದ ಇಶಾನ್, ಇನ್ನೊಂದು ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ.

ಇಶಾನ್‍ಗಾಗಿ ಹೊಸ ಸಿನಿಮಾ ನಿರ್ದೇಶಿಸುತ್ತಿರುವುದು ಪವನ್ ಒಡೆಯರ್. ಇತ್ತೀಚೆಗಷ್ಟೆ ನಟಸಾರ್ವಭೌಮ ಸಕ್ಸಸ್ ಆದ ಜೋಶ್‍ನಲ್ಲಿರುವ ಪವನ್ ಒಡೆಯರ್, ಇಶಾನ್‍ಗೆ ಹೊಂದುವ ಕಥೆ ಸಿದ್ಧ ಮಾಡುತ್ತಿದ್ದಾರೆ. ಇಶಾನ್ ಅಣ್ಣ ಸಿ.ಆರ್.ಮನೋಹರ್ ಅವರೇ ಸಿನಿಮಾ ನಿರ್ಮಾಪಕ. ಅದ್ಧೂರಿ ಸಿನಿಮಾ ಅನ್ನೋದು ಗ್ಯಾರಂಟಿ. 

Ayushmanbhava Movie Gallery

Damayanthi Audio and Trailer Launch Gallery