ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಇನ್ನೂ ಹೆಸರಿಡದ ಹೊಸ ಚಿತ್ರಕ್ಕೆ ಪಂಚತಂತ್ರ ಖ್ಯಾತಿಯ ಸೋನಾಲ್ ನಾಯಕಿ ಎಂಬ ಸುದ್ದಿಯನ್ನು ಓದಿದ್ದೀರಿ. ಈಗ ಅದೇ ಚಿತ್ರಕ್ಕೆ ಇನ್ನೊಬ್ಬ ನಾಯಕಿಯ ಆಯ್ಕೆಯೂ ಆಗಿದೆ. ಅದು ಮೇಘನಾ ರಾಜ್. ಮದುವೆಯ ನಂತರ ನಿರ್ಮಾಪಕಿಯಾಗುತ್ತಿರುವ ಮೇಘನಾ, ನಟನೆಯನ್ನೂ ಕಂಟಿನ್ಯೂ ಮಾಡಿದ್ದಾರೆ. ಮದುವೆಯ ನಂತರ ಉಪೇಂದ್ರ ಜೊತೆ ಮೊದಲ ಬಾರಿಗೆ ನಟಿಸುತ್ತಿದ್ದಾರೆ.
ಅಯೋಗ್ಯ, ಚಮಕ್ ಖ್ಯಾತಿಯ ಚಂದ್ರಶೇಖರ್ ನಿರ್ಮಾಣದ ಚಿತ್ರ, ಇನ್ನೂ ಒಂದು ಸ್ಪೆಷಾಲಿಟಿ ಹೊಂದಿದೆ. ಚಿತ್ರಕ್ಕೆ ವಿಲನ್ ಆಗುತ್ತಿರುವುದು ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ. ಹೀರೋ ಆಗಿದ್ದ ನಟ ವಿಲನ್ ಆಗುತ್ತಿರುವುದು ಹೊಸ ಬೆಳವಣಿಗೆ. ಅಲ್ಲಿಗೆ ಆದಿತ್ಯ ಕೂಡಾ ಧನಂಜಯ್ ಹಾದಿಯಲ್ಲೇ ಸಾಗುತ್ತಿದ್ದಾರೆ.
ಮಯೂರ್ ನಿರ್ದೇಶನದ ಹೊಸ ಸಿನಿಮಾದ ಚಿತ್ರೀಕರಣ ಮೇ 24ರಿಂದ ಶುರುವಾಗಲಿದೆ.