` ಕಥೆ, ಸೀನ್ ಬರೆಯಿರಿ - ರಿಷಬ್ ಶೆಟ್ಟಿ ಸ್ಪರ್ಧೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rishab shetty's open invitation to writers
Rishab Shetty

ಒಂದು ವೇಳೆ ಕಿರಿಕ್ ಪಾರ್ಟಿ ಸಿನಿಮಾ, ಗ್ಯಾಂಗ್‍ಸ್ಟರ್ ಕಥೆಯಾಗಿದ್ದರೆ.. ಕಥೆ ಹೇಗಿರುತ್ತಿತ್ತು..?

ಸಹಿಪ್ರಾಶಾಲೆಯ ಅನಂತ ಪದ್ಮನಾಭ್, ಬೆಲ್‍ಬಾಟಂನ ಕುಸುಮ, ಉಳಿದವರು ಕಂಡಂತೆ ಚಿತ್ರದ ರತ್ನಕ್ಕ, ರಂಗನಾಯಕಿ ಚಿತ್ರದ ಶೇಖರ್.. ಈ ನಾಲ್ಕು ಪಾತ್ರಗಳ ಪೈಕಿ, ಒಂದನ್ನ ಆಯ್ಕೆ ಮಾಡಿಕೊಳ್ಳಿ. ಆ ಪಾತ್ರದ ಚಿತ್ರಣ ಬರೆಯಿರಿ. ಅದು ಅವರವರ ದೃಷ್ಟಿಯಲ್ಲೇ ಇರಬೇಕು.

ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ನಡೆಯಬಹುದಾದ ಹಾಸ್ಯ ಸನ್ನಿವೇಶವನ್ನು ದೃಶ್ಯ ವಿವರ, ಸಂಭಾಷಣೆ ಸಹಿತ ಬರೆಯಿರಿ.

ಇದು ನವನೀವನ ಕಲ್ಪನೆಯ ಬರಹಗಾರರಿಗೆ, ನಟ, ನಿರ್ದೇಶಕ ರಿಷಬ್ ಶೆಟ್ಟಿ ನೀಡಿರುವ ಪಂಥಾಹ್ವಾನ. ಕಥಾಸಂಗಮ ಚಿತ್ರದಲ್ಲಿ ಕಥೆಗಾರರಿಗೆ ಅವಕಾಶ ಕೊಟ್ಟಂತೆಯೇ, ಈಗ ಬರಹಗಾರರಿಗೆ, ಸನ್ನಿವೇಶ ವಿಸ್ತರಿಸುವ, ಮೆರುಗು ನೀಡುವವರಿಗೆ ಇಂತಹುದೊಂದು ಸ್ಪರ್ಧೆ ಮುಂದಿಟ್ಟಿದ್ದಾರೆ ರಿಷಬ್.

ನೀವೂ ಬರೆಯಬಹುದು. ಎರಡು ಪುಟ ಮೀರಬಾರದು. ಮೇ 23ರೊಳಗೆ ಕಳುಹಿಸಿಕೊಟ್ಟರೆ ಸಾಕು.

 

Geetha Movie Gallery

Damayanthi Teaser Launch Gallery