ಇತ್ತೀಚೆಗೆ ತಮಿಳಿನ ರೌಡಿ ಬೇಬಿ ಹಾಡು ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತು. ಪ್ರಭುದೇವ ಕೊರಿಯೋಗ್ರಫಿ ಮಾಡಿದ್ದ ಹಾಡಿಗೆ ಧನುಷ್ ಮತ್ತು ಸಾಯಿಪಲ್ಲವಿಯ ಡ್ಯಾನ್ಸ್ ಹುಚ್ಚೆಬ್ಬಿಸುವಂತಿತ್ತು. ಅದಕ್ಕೆ ಸಡ್ಡು ಹೊಡೆಯುವಂತಹ ಹಾಡೊಂದು ಕನ್ನಡದಲ್ಲಿಯೇ ಬಂದಿದೆ. ರುಸ್ತುಂ ಚಿತ್ರದಲ್ಲಿ.
ಯೂ ಆರ್ ಮೈ ಪೊಲೀಸ್ ಬೇಬಿ ಅನ್ನೋ ಹಾಡು ರುಸ್ತುಂ ಚಿತ್ರದ್ದು. ಕುಣಿದಿರೋದು ಶಿವರಾಜ್‍ಕುಮಾರ್ ಮತ್ತು ಶ್ರದ್ಧಾ ಶ್ರೀನಾಥ್. ಆ ಹಾಡಿನ ನೆರಳಾಗಲೀ, ಡ್ಯಾನ್ಸ್‍ನ ನೆರಳಾಗಲೀ ಈ ಹಾಡಿನಲ್ಲಿಲ್ಲ. ಆದರೆ ಕುಣಿತ ಬೊಂಬಾಟ್ ಆಗಿದೆ ಅನ್ನೋ ಸಿಗ್ನಲ್ಲನ್ನಂತೂ ಕೊಟ್ಟಿದೆ.
ಎ.ಪಿ.ಅರ್ಜುನ್ ಬರೆದಿರುವ ಹಾಡಿಗೆ ರಘು ದೀಕ್ಷಿತ್, ಅಪೂರ್ವ ಶ್ರೀಧರ್ ಧ್ವನಿ ನೀಡಿದ್ದಾರೆ. ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ, ಅನೂಪ್ ಸೀಳಿನ್ ಅವರ ಸಂಗೀತದ ಕಿಕ್ಕನ್ನು ಹೆಚ್ಚಿಸುವ ಹಾಗಿದೆ. ಅಂದಹಾಗೆ ಇದು ಇಂಡಿಯಾದ ನಂಬರ್ 1 ಸ್ಟಂಟ್ ಮಾಸ್ಟರ್ ರವಿವರ್ಮ ನಿರ್ದೇಶನದ ಮೊದಲ ಚಿತ್ರ ರುಸ್ತುಂ.