ಜೋಡೆತ್ತು ಚಿತ್ರದ ಟೈಟಲ್‍ನ್ನು ಮೆಜೆಸ್ಟಿಕ್ ರಾಮಮೂರ್ತಿ ದರ್ಶನ್ ಅವರಿಗಾಗಿಯೇ ಪಡೆದಿರುವುದು ಗೊತ್ತಿದೆ ತಾನೇ. ಆದರೆ, ಆ ಚಿತ್ರದಲ್ಲಿ ತಾನು ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಯಶ್. ದರ್ಶನ್ ನನ್ನ ಸೀನಿಯರ್ ನಟ. ಒಳ್ಳೆಯ ಕಥೆ ಸಿಕ್ಕರೆ ಅವರ ಜೊತೆ ನಟಿಸಬೇಕು ಎಂದುಕೊಂಡಿದ್ದೇನೆ ಎಂದಿರುವ ಯಶ್, ಜೋಡೆತ್ತು ಚಿತ್ರದಲ್ಲಿ ನಾನಿಲ್ಲ ಎಂದಿದ್ದಾರೆ.
ಅಷ್ಟೇ ಅಲ್ಲ, ನಿಖಿಲ್ ಎಲ್ಲಿದ್ದೀಯಪ್ಪ ಚಿತ್ರತಂಡಕ್ಕೂ ಶುಭ ಹಾರೈಸಿದ್ದಾರೆ.