ಶಿವರಾಜ್‍ಕುಮಾರ್, ಹರ್ಷ ಕಾಂಬಿನೇಷನ್‍ನ ಸೂಪರ್ ಹಿಟ್ ಸಿನಿಮಾ ಭಜರಂಗಿ. 6 ವರ್ಷಗಳ ಹಿಂದೆ ಬಾಕ್ಸಾಫೀಸ್‍ನಲ್ಲಿ ದೂಳೆಬ್ಬಿಸಿದ್ದ ಚಿತ್ರ. ಅದಾದ ಮೇಲೆ ಶಿವಣ್ಣ-ಹರ್ಷ ವಜ್ರಕಾಯ ಸಿನಿಮಾ ಮಾಡಿ, ಮತ್ತೊಮ್ಮೆ ಸಕ್ಸಸ್ ಕಂಡರು. ಅದೇ ಜೋಡಿ ಮೈ ನೇಮ್ ಈಸ್ ಅಂಜಿ ಚಿತ್ರಕ್ಕೆ ಜೊತೆಯಾಗಿತ್ತು. ಆದರೀಗ ಚಿತ್ರದ ಟೈಟಲ್‍ನ್ನು ಭಜರಂಗಿ 2 ಎಂದು ಇಡಲು ನಿರ್ಧರಿಸಿದೆಯಂತೆ.
ಜಯಣ್ಣ ಬ್ಯಾನರ್‍ನಲ್ಲಿ ಬರುತ್ತಿರುವ ಈ ಚಿತ್ರಕ್ಕೆ ಪ್ರಿ-ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು, ಭಾವನಾ ಮೆನನ್ (ಜಾಕಿ ಭಾವನಾ) ಹೀರೋಯಿನ್ ಎನ್ನಲಾಗಿದೆ.