ಭಟ್ಟರ ಪಂಚತಂತ್ರದಲ್ಲಿ ಶೃಂಗಾರದ ಹೊಂಗೆ ಮರದಲ್ಲಿ ಹೂ ಬಿಟ್ಟಿದ್ದ ಹುಡುಗಿ ಸೋನಾಲ್. ಈಗ ಭಟ್ಟರ ಗಾಳಿಪಟ ಹಾರಿಸೋಕೂ ಅವರೇ ನಾಯಕಿ. ಅವರೀಗ ಉಪ್ಪಿಯ ಹೊಸ ಚಿತ್ರಕ್ಕೂ ನಾಯಕಿ.
ಟಿ.ಆರ್.ಚಂದ್ರಶೇಖರ್ ನಿರ್ಮಾಣದ, ಮೌರ್ಯ ಎನ್ನುವವರು ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ಸೋನಾಲ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಉಪ್ಪಿ-ಗುರುಕಿರಣ್ ಕಾಂಬಿನೇಷನ್ ಮತ್ತೊಮ್ಮೆ ಜೊತೆಯಾಗಿರುವ ಆ ಚಿತ್ರದ ಶೂಟಿಂಗ್, ಮೇ ವಾರಾಂತ್ಯದಲ್ಲಿ ಶುರುವಾಗಲಿದೆಯಂತೆ.