ದಬಾಂಗ್ 3 ಸಿನಿಮಾದ ಕ್ಲೈಮಾಕ್ಸ್ ಶೂಟಿಂಗ್ ಮುಗಿದಿದೆ. ಸಲ್ಮಾನ್ ಎದುರು ನೆಗೆಟಿವ್ ರೋಲ್‍ನಲ್ಲಿ ನಟಿಸಿರುವ ಕಿಚ್ಚ ಸುದೀಪ್, ಇದೇ ಮೊದಲ ಬಾರಿಗೆ ಷರ್ಟ್‍ಲೆಸ್ ಆಗಿ ಫೈಟ್ ಮಾಡಿದ್ದಾರೆ. ಸಲ್ಮಾನ್ ಖಾನ್, ಷರ್ಟ್ ತೆಗೆಯೋಕೆ ಫೇಮಸ್. ಅವರು ಬರೀ ಮೈಲಿ ಒಂದು ಸೀನ್ ಆದರೂ ಕಾಣಿಸಿಕೊಂಡರೆ ಚಿತ್ರ ಹಿಟ್ ಎನ್ನುವುದು ಬಾಲಿವುಡ್ ಮಂದಿಯ ನಂಬಿಕೆ.
ಆದರೆ, ನಮ್ಮ ಕಿಚ್ಚ ಸುದೀಪ್‍ಗೆ ಇದು ಹೊಸದು. ಈಗ ಅವರೂ ಸಿಕ್ಸ್‍ಪ್ಯಾಕ್‍ನಲ್ಲಿರೋದ್ರಿಂದ ನೋ ಪ್ರಾಬ್ಲಂ. ಸಲ್ಮಾನ್ ಜೊತೆ ಷರ್ಟ್‍ಲೆಸ್ ಫೈಟ್ ಮಾಡುವುದನ್ನು ಯಾವತ್ತೂ ನಾನು ಆಲೋಚಿಸಿರಲಿಲ್ಲ. ಈಗ ಅದನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದಿದ್ದಾರೆ ಸುದೀಪ್. ಪ್ರಭುದೇವ ನಿರ್ದೇಶನದ ಚಿತ್ರವಿದು.