` ದುನಿಯಾ ವಿಜಿಗೆ ಕಿಚ್ಚನ ಹಾರೈಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep congragulates duniya vijay
Sudeep, Duniya Vijay

ನಟ ದುನಿಯಾ ವಿಜಯ್, ನಿರ್ದೇಶಕರಾಗಲು ಹೊರಟಿರುವುದನ್ನು ನಟ ಸುದೀಪ್ ಸ್ವಾಗತಿಸಿದ್ದಾರೆ. ಸುದೀಪ್ ಅಭಿನಯದ ರಂಗ ಎಸ್‍ಎಸ್‍ಎಲ್‍ಸಿ ಚಿತ್ರದಲ್ಲಿ ದುನಿಯಾ ವಿಜಿ, ವಿಲನ್ ಆಗಿ ನಟಿಸಿದ್ದವರು. ಅದಾದ ಮೇಲೆ ವಿಜಿ, ಹೀರೋ ಆಗಿ, ಸ್ಟಾರ್ ಆದರು. ಈಗ ಡೈರೆಕ್ಟರ್ ಆಗುತ್ತಿದ್ದಾರೆ.

ವಿಜಿ ನಿರ್ದೇಶಕರಾಗುತ್ತಿರುವುದನ್ನು ಚಿತ್ರಲೋಕ ವೆಬ್‍ಸೈಟ್‍ನಲ್ಲಿ ನೋಡಿ ತಿಳಿದ ಸುದೀಪ್, ಅದನ್ನೇ ರೀ ಟ್ವೀಟ್ ಮಾಡಿದ್ದಾರೆ. ಶುಭ ಹಾರೈಸುವುದರ ಜೊತೆಗೆ, ನಮ್ಮನ್ನು ನಾವೇ ಹುಡುಕಿಕೊಳ್ಳುವ ಈ ಸಾಹಸ ನಿಜಕ್ಕೂ ಬೇರೆಯದೇ ಅನುಭವ. ನಿರ್ದೇಶಕರಾಗಲು ಹೊರಟಿರುವ ದುನಿಯಾ ವಿಜಯ್‍ಗೆ ಶುಭವಾಗಲಿ. ನಿಮ್ಮ ಪ್ರತಿ ಹೆಜ್ಜೆಯನ್ನೂ ಆನಂದಿಸಿ ಎಂದು ಶುಭ ಕೋರಿದ್ದಾರೆ ಸುದೀಪ್.

Sagutha Doora Doora Movie Gallery

Popcorn Monkey Tiger Movie Gallery