ರಾಮಾ ರಾಮಾ ರೇ ಮೂಲಕ ಸಂಚಲನ ಮೂಡಿಸಿದ್ದ, ಒಂದಲ್ಲಾ ಎರಡಲ್ಲಾ ಚಿತ್ರದ ಮೂಲಕ ಭಾವನೆಗಳನ್ನು ಬಡಿದೆಬ್ಬಿಸಿದ್ದ ನಿರ್ದೇಶಕ ಸತ್ಯಪ್ರಕಾಶ್. ಅವರಿಗೀಗ ಒಂದೊಳ್ಳೆ ಆಫರ್ ಸಿಕ್ಕಿದೆ. ಅದು ಪುನೀತ್ ಬ್ಯಾನರ್‍ನಲ್ಲಿ. ಪಿಆರ್‍ಕೆ ಪ್ರೊಡಕ್ಷನ್‍ನಲ್ಲಿ ಚಿತ್ರ ನಿರ್ದೇಶನಕ್ಕೆ ಸತ್ಯಪ್ರಕಾಶ್ ರೆಡಿಯಾಗಿದ್ದಾರೆ. ಕಥೆಯನ್ನು ಪುನೀತ್ ಇಷ್ಟಪಟ್ಟಿದ್ದು, ಚಿತ್ರಕಥೆಯಲ್ಲಿ ಬ್ಯುಸಿಯಾಗಿದ್ದಾರಂತೆ ಸತ್ಯಪ್ರಕಾಶ್. ಅದು ಫೈನಲ್ ಆಗುವವರೆಗೆ ನೋ ಟಾಕ್ ಎಂದಿದ್ದಾರೆ ಸತ್ಯಪ್ರಕಾಶ್.
ಕವಲುದಾರಿ ಸಕ್ಸಸ್ ಜೋಶ್‍ನಲ್ಲಿರುವ ಪುನೀತ್ ಬ್ಯಾನರ್‍ನಲ್ಲಿ ಈಗಾಗಲೇ ಮಾಯಾಬಜಾರ್, ಲಾ ಚಿತ್ರಗಳ ಶೂಟಿಂಗ್ ಮುಗಿದಿದೆ. ಪನ್ನಗಾಭರಣ, ಡ್ಯಾನಿಶ್ ಸೇಟ್ ಕಾಂಬಿನೇಷನ್ನಿನ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಒಂದರ ಹಿಂದೊಂದು ಬ್ರಿಡ್ಜ್ ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಪುನೀತ್, ಯವ ನಿರ್ದೇಶಕರಿಗೆ ಪ್ರೋತ್ಸಾಹ ನೀಡುತ್ತಿರುವುದು ವಿಶೇಷ.