` ಬ್ಯಾಟಿಂಗ್ ಇಷ್ಟ.. ಬೌಲಿಂಗ್, ಫೀಲ್ಡಿಂಗ್ ಅಂದ್ರೆ ಕಷ್ಟ ಕಷ್ಟ - DPLನಲ್ಲಿ ದರ್ಶನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
darshan at dpl tournament
Darshan at DPL Cricket Tournament

ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಕ್ರಿಕೆಟ್ ಇಷ್ಟವೇ ಆದರೂ, ಆಡಿದ್ದನ್ನು ನೋಡಿದವರು ಕಡಿಮೆ. ಅಂತಹ ದರ್ಶನ್, ದರ್ಶನ್ ಅಭಿಮಾನಿಗಳು ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಗೆ ಆಗಮಿಸಿದ್ದರು. ಚಿಕ್ಕ ಮಕ್ಕಳಂತೆ ತಮ್ಮ ಕ್ರಿಕೆಟ್ ಪ್ರೀತಿಯನ್ನು ಹೇಳಿಕೊಂಡ ದರ್ಶನ್, ನನಗೆ ಬ್ಯಾಟಿಂಗ್ ಇಷ್ಟ, ಫೀಲ್ಡಿಂಗ್, ಬೌಲಿಂಗ್ ಅಂದ್ರೆ ಆಗಲ್ಲ ಎಂದಾಗ, ಅಭಿಮಾನಿಗಳು ಹೋ ಎಂದರು. ದರ್ಶನ್‍ಗೆ ಸಚಿನ್ ತೆಂಡೂಲ್ಕರ್ ಅಂದ್ರೆ ಪಂಚಪ್ರಾಣ. 

ಅಂದಹಾಗೆ ಇದು ದರ್ಶನ್ ಅಭಿಮಾನಿಗಳೇ ಆಯೋಜಿಸುವ ಕ್ರಿಕೆಟ್ ಟೂರ್ನಿ. ಅದನ್ನು ಹೆಮ್ಮೆಯಿಂದ ಹೇಳಿಕೊಂಡ ದರ್ಶನ್, ರಾಜ್ಯದ ನಾನಾ ಭಾಗಗಳಿಂದ ಅಭಿಮಾನಿಗಳು ಬರುತ್ತಾರೆ. ಒಟ್ಟಿಗೇ ಸೇರುತ್ತಾರೆ. ಕ್ರಿಕೆಟ್ ಆಡ್ತಾರೆ. ಅವರದ್ದೇ ಖರ್ಚಿನಲ್ಲಿ. ನಾನು ಕೇವಲ ಹುರಿದುಂಬಿಸಲು ಬರುತ್ತೇನೆ. ಅವರ ಸಂಭ್ರಮವೇ ನನ್ನ ಸಂಭ್ರಮ ಎಂದರು ದರ್ಶನ್. ಅಂದಹಾಗೆ, ಐಪಿಎಲ್, ಕೆಪಿಎಲ್ ಮಾದರಿಯಲ್ಲಿ ಪ್ರತಿವರ್ಷ ದರ್ಶನ್ ಅಭಿಮಾನಿಗಳು ಡಿಪಿಎಲ್ ಆಯೋಜಿಸುತ್ತಾರೆ.

Geetha Movie Gallery

Ombattane Dikku Launch Meet Gallery