` ಐಶಾನಿ ಶೆಟ್ಟಿಯ ಕಾಜಿಗೆ ಭರಪೂರ ಮೆಚ್ಚುಗೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
aishani shetty's kaaji gets good response
Kaaji Movie Image

ವಾಸ್ತುಪ್ರಕಾರ, ನಡುವೆ ಅಂತರವಿರಲಿ ಚಿತ್ರಗಳ ಮೂಲಕ ಖ್ಯಾತಿಗೆ ಬಂದಿರುವ ನಟಿ. ನಟಿಯಾಗಿ ಡಿಮ್ಯಾಂಡ್ ಇರುವಾಗಲೇ ನಿರ್ದೇಶನಕ್ಕೆ ಕೈ ಹಾಕಿ ಗೆದ್ದಿದ್ದಾರೆ ಐಶಾನಿ. ಐಶಾನಿ ನಿರ್ದೇಶನದ ಕಾಜಿ ಕಿರುಚಿತ್ರ, ಈಗ ಯೂಟ್ಯೂಬ್‍ನಲ್ಲಿ ಲಭ್ಯವಿದೆ. ಕಾಜಿ ಕಿರುಚಿತ್ರದ ನಿರ್ಮಾಪಕ, ನೀನಾಸಂ ಸತೀಶ್. ಅವರೇ ಈಗ ಚಿತ್ರವನ್ನು ಸತೀಶ್ ಆಡಿಯೋ ಆನ್‍ಲೈನ್ ಪೇಜ್‍ನಲ್ಲಿ ರಿಲೀಸ್ ಮಾಡಿದ್ದಾರೆ.

ಕಾಜಿ, ಅಮ್ಮಂದಿರ ಕುರಿತಾದ ಕಿರುಚಿತ್ರ. ಈಗಾಗಲೇ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ, ಸೈಮಾ, ಪಿಂಕ್ ಸಿಟಿ ಇಂಟರ್‍ನ್ಯಾಷನಲ್ ಅವಾರ್ಡ್ ಚಿತ್ರೋತ್ಸವಗಳಲ್ಲಿ ಹಲವು ಪ್ರಶಸ್ತಿ ಗೆದ್ದಿದ್ದ ಕಾಜಿ, ಈಗ ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಕಿರುಚಿತ್ರದಲ್ಲಿ ಹಿತಾ ಚಂದ್ರಶೇಖರ್, ಇಂಚರಾ, ವಿದ್ಯಾ, ಮಧುರ ಚೆನ್ನಿಗ, ಸುಬ್ಬಣ್ಣ ಮೊದಲಾದವರು ನಟಿಸಿದ್ದಾರೆ.

Geetha Movie Gallery

Ombattane Dikku Launch Meet Gallery