` ಅದ್ಧೂರಿ 2ಗೆ ಧ್ರುವ ಸರ್ಜಾ ಇಲ್ಲ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
adhuri movie image
Radhika Pandit, Dhruva Sarja

ಅದ್ಧೂರಿ, ಧ್ರುವ ಸರ್ಜಾ ಅಭಿನಯದ ಮೊದಲ ಸಿನಿಮಾ. ರಾಧಿಕಾ ಪಂಡಿತ್ ನಾಯಕಿಯಾಗಿದ್ದ ಅದ್ಧೂರಿ, ಸೂಪರ್ ಹಿಟ್ ಆಗಿತ್ತು. ಈಗ ಆ ಚಿತ್ರದ ಸೀಕ್ವೆಲ್‍ಗೆ ವೇದಿಕೆ ಸಿದ್ಧವಾಗಿದೆ. ಆದರೆ, ಈ ಸೀಕ್ವೆಲ್‍ನಲ್ಲಿ ಧ್ರುವ ಸರ್ಜಾ ಆಗಲೀ, ರಾಧಿಕಾ ಪಂಡಿತ್ ಆಗಲೀ ಇರಲ್ಲ. ನಿರ್ದೇಶಕರೂ ಅಷ್ಟೆ, ಎ.ಪಿ.ಅರ್ಜುನ್ ಅಲ್ಲ.

ಅದ್ಧೂರಿಯನ್ನು ನಿರ್ಮಿಸಿದ್ದ ಶಂಕರ್ ರೆಡ್ಡಿ, ಮೋಹನ್ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ರಮೇಶ್ ವೆಂಕಟೇಶ್ ಅನ್ನೋ ಹೊಸ ಹುಡುಗ ನಿರ್ದೇಶಕರಾಗುತ್ತಿದ್ದಾರೆ.

ಹೀರೋ ಆಗುತ್ತಿರುವುದು ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ. ಸದ್ಯಕ್ಕೆ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ. ಅಧಿಕೃತ ಘೋಷಣೆಯೊಂದೇ ಬಾಕಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery