ಉಪೇಂದ್ರ, ರಚಿತಾ ರಾಮ್, ಆರ್. ಚಂದ್ರು, ಸೋನುಗೌಡ ಕಾಂಬಿನೇಷನ್ ಸಿನಿಮಾ ಐ ಲವ್ ಯೂ. ಇದು ಎ, ಉಪೇಂದ್ರ, ಪ್ರೀತ್ಸೆ ಚಿತ್ರಗಳ ಕೊಲಾಜ್ ಎಂದಿದ್ದಾರೆ ಚಂದ್ರು. ರಚಿತಾರ ಬೋಲ್ಡ್ ಲುಕ್ಕುಗಳು ಪಡ್ಡೆಗಳ ನಿದ್ದೆಗೆಡಿಸಿ ಆಗಿದೆ. ಜೂನ್ 14ಕ್ಕೆ ತೆರೆಗೆ ಬರುತ್ತಿದೆ ಐ ಲವ್ ಯೂ.
ಕನ್ನಡ, ತೆಲುಗು ಎರಡೂ ಭಾಷೆಯಲ್ಲಿ ನಿರ್ಮಾಣವಾಗಿರುವ ಸಿನಿಮಾ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿವೆ. ಅದೂ 1000ಕ್ಕೂ ಹೆಚ್ಚು ಟಾಕೀಸುಗಳಲ್ಲಿ.
ಕೆಜಿಎಫ್ ನಂತರ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಹೆಗ್ಗಳಿಕೆ ಉಪ್ಪಿ ಚಿತ್ರಕ್ಕೆ ಸಿಗಲಿದೆ.