ಜೂನ್ 14, ಸ್ಯಾಂಡಲ್‍ವುಡ್ ಸ್ಟಾರ್‍ಗಳಿಬ್ಬರ ಮುಖಾಮುಖಿಗೆ ಸಾಕ್ಷಿಯಾಗಲಿದೆ. ಹೌದು, ಆ ದಿನ ಕನ್ನಡದ ಎರಡು ಬಹುನಿರೀಕ್ಷಿತ ಚಿತ್ರಗಳು ರಿಲೀಸ್ ಆಗುತ್ತಿವೆ. ಆಪ್ತಮಿತ್ರರಾಗಿರುವ ಉಪೇಂದ್ರ ಮತ್ತು ಶಿವರಾಜ್‍ಕುಮಾರ್, ಇಬ್ಬರ ಚಿತ್ರಗಳು ಕೂಡಾ ಒಂದೇ ದಿನ ತೆರೆಗೆ ಬರುತ್ತಿವೆ.
ಶಿವಣ್ಣ ಅಭಿನಯದ ರುಸ್ತುಂ, ಅದೇ ದಿನ ತೆರೆಗೆ ಬರುತ್ತಿದೆ. ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶಕರಾಗಿರುವ ಚಿತ್ರದಲ್ಲಿ ವಿವೇಕ್ ಒಬೇರಾಯ್ ಕೂಡಾ ನಟಿಸಿದ್ದಾರೆ. ರಚಿತಾ ರಾಮ್, ಒಬೇರಾಯ್‍ಗೆ ಜೋಡಿಯಾದರೆ, ಶ್ರದ್ಧಾ ಶ್ರೀನಾಥ್ ಶಿವಣ್ಣನ ಜೋಡಿ. ಮಯೂರಿ, ಶಿವಣ್ಣನ ತಂಗಿ.
ಅದೇ ದಿನ ಉಪೇಂದ್ರ ಅಭಿನಯದ ಐ ಲವ್ ಯೂ ರಿಲೀಸ್ ಆಗುತ್ತಿದೆ. ಆ ಚಿತ್ರಕ್ಕೆ ರಚಿತಾ ರಾಮ್ ಹೀರೋಯಿನ್. ಸೋನು ಗೌಡ ಕೂಡಾ ಪ್ರಧಾನ ಪಾತ್ರದಲ್ಲಿರುವ ಚಿತ್ರಕ್ಕೆ ಆರ್.ಚಂದ್ರು ನಿರ್ದೇಶಕ.