ಶರಣ್, ಅಶಿಕಾ ರಂಗನಾಥ್, ಸಿಂಪಲ್ ಸುನಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್ನಿನ ಸಿನಿಮಾ ಅವತಾರ್ ಪುರುಷ. ಶರಣ್ ಇರುವ ಕಾರಣಕ್ಕೆ ಇದು ಕಾಮಿಡಿ ಸಿನಿಮಾ ಎನ್ನುವುದಕ್ಕೆ ನೋ ಪ್ರಾಬ್ಲಂ. ಆದರೆ, ಈ ಕಾಮಿಡಿ ಜೊತೆ ಜೊತೆಯಲ್ಲೇ ಹಾರರ್ ಕೂಡಾ ಇದೆಯಂತೆ.
ಆಪ್ತಮಿತ್ರ ಶೈಲಿಯ ಹಾರರ್ ಅಂಶಗಳೂ ಚಿತ್ರದ ಕಥೆಯಲ್ಲಿವೆ ಎಂದಿರುವ ಸುನಿ, ಇದನ್ನು ಹಾರರ್ ಕಾಮಿಡಿ ಎಂದೇ ಕರೆದಿದ್ದಾರೆ. ಸುಧಾರಾಣಿ, ಸಾಯಿಕುಮಾರ್ ಕೂಡಾ ಚಿತ್ರದ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಕ್ಟೋಬರ್‍ನಲ್ಲಿ ರಿಲೀಸ್ ಆಗಲಿರುವ ಅವತಾರ್ ಪುರುಷ, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿ, ಥ್ರಿಲ್ ಕೊಡ್ತಾನೆ ಅನ್ನೋದು ಪುಷ್ಕರ್ ಭರವಸೆ.