` ಲವ್, ಮ್ಯಾರೇಜ್ ನಂತರ ಟಾಕೀಸ್‍ಗೆ ಕೃಷ್ಣ  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ajai rao to play as krishna for the fift time
Ajai Rao

ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣಲೀಲಾ.. ಹೀಗೆ ಕೃಷ್ಣ ಎಂದ ತಕ್ಷಣ ಕನ್ನಡ ಚಿತ್ರರಸಿಕರ ಕಣ್ಣ ಮುಂದೆ ಬರೋದು ಈಗ ಅಜೇಯ್ ರಾವ್. ಅವರು ಮತ್ತೊಮ್ಮೆ ಕೃಷ್ಣನಾಗುತ್ತಿದ್ದಾರೆ. ಕೃಷ್ಣ ಟಾಕೀಸ್‍ಗೆ ಬರುತ್ತಿದ್ದಾರೆ. ಏಕೆಂದರೆ, ಕೃಷ್ಣ ಅನ್ನೋದು ಅವರಿಗೆ ಲಕ್ಕಿ. ಹೀಗಾಗಿಯೇ.. ಅವರು ತಮ್ಮ ಅಜೇಯ್ ರಾವ್ ಹೆಸರನ್ನು ಕೃಷ್ಣ ಅಜಯ್ ಎಂದು ಬದಲಿಸಿಕೊಂಡಿದ್ದಾರೆ.

ಕೃಷ್ಣನಿಗೆ ಜೊತೆಯಾಗ್ತಿರೋದು ಸಿಂಧು ಲೋಕನಾಥ್. ಮದುವೆಯ ನಂತರ ಚಿತ್ರರಂಗದಿಂದ ದೂರವೇ ಇದ್ದ ಸಿಂಧು, ಕೃಷ್ಣನಿಗೆ ಜೋಡಿಯಾಗುತ್ತಿದ್ದಾರೆ. ಅವರಿಗಿದು ಸೆಕೆಂಡ್ ಇನ್ನಿಂಗ್ಸ್. ರೀ ಎಂಟ್ರಿ.

ಡೈರೆಕ್ಟರ್ ಆಗಿರುವುದು ಆನಂದ್ ಪ್ರಿಯಾ ಅಲಿಯಾಸ್ ವಿಜಯಾನಂದ್. ಎಎಚ್ ಗೋವಿಂದರಾಜು ನಿರ್ಮಾಣದ ಚಿತ್ರಕ್ಕೆ ಸಂಭ್ರಮ ಶ್ರೀಧರ್ ಸಂಗೀತವಿದೆ. ಕೃಷ್ಣ ಟಾಕೀಸ್‍ಗೆ ಬಾಲ್ಕನಿ ಎಫ್13 ಅನ್ನೋ ಟ್ಯಾಗ್‍ಲೈನ್ ಇದೆ.