` ಅಂದವಾದ ಅನುಷಾ ರಂಗನಾಥ್.. ಮತ್ತೆ ಬಂದ್ರು.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
anusha ranganath back to movies
Anusha Ranganath

ಚುಟು ಚುಟು ಹಾಡಿನ ಅಶಿಕಾ ರಂಗನಾಥ್, ಈಗ ಕನ್ನಡ ಚಿತ್ರರಸಿಕರ ಹಾಟ್ ಫೇವರಿಟ್. ಈ ಅನುಷಾ ರಂಗನಾಥ್ ಅವರ ಅಕ್ಕ. ಇವರೂ ಚಿತ್ರರಂಗದಲ್ಲಿದ್ದವರೇ. ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ, ಕೌರವ, ಲೈಫ್ 360 ಚಿತ್ರಗಳಿಗೆ ಹೀರೋಯಿನ್ ಆಗಿದ್ದವರು. ಸ್ವಲ್ಪ ದಿನ ಚಿತ್ರರಂಗದಿಂದ ದೂರವೇ ಇದ್ದ ಅನುಷಾ, ಈಗ ಮತ್ತೊಮ್ಮೆ ಅಂದವಾದ ಎಂಟ್ರಿ ಕೊಟ್ಟಿದ್ದಾರೆ. ಅನುಷಾ ಅಭಿನಯದ ಹೊಸ ಚಿತ್ರದ ಹೆಸರೇ ಅಂದವಾದ..

ಮಳೆ, ಹಿಮವನ್ನೇ ಕಥೆಯ ವಸ್ತುವನ್ನಾಗಿಸಿಕೊಂಡಿರೋ ಈ ಚಿತ್ರದಲ್ಲಿ ಅನುಷಾ ಅವರದ್ದು, ಸುಳ್ಳು ಹೇಳಿಕೊಂಡೇ ಪ್ರೀತಿಸುವ ಹುಡುಗಿಯ ಪಾತ್ರ. ವಿಚಲ ನಿರ್ದೇಶಕರು. ಜೈ ಅನ್ನೋ ಹುಡುಗ ಹೀರೋ. ನಾಯಕನಿಗೆ ನಾಯಕಿ ಸುಳ್ಳು ಹೇಳ್ತಿರೋದೇಕೆ ಅನ್ನೋದು ಗೊತ್ತಾದಾಗ, ಕಥೆಗೆ ವಿಚಿತ್ರ ತಿರುವು ಸಿಗುತ್ತಂತೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಒಟ್ಟೊಟ್ಟಿಗೇ ಅಕ್ಕ-ತಂಗಿಯ ಹವಾ ಎದ್ದಿದೆ.

Sagutha Doora Doora Movie Gallery

Popcorn Monkey Tiger Movie Gallery